ಹಾಡಹಗಲೇ ಬಂಡೀಪುರ ಬಳಿಯ ಕಂಟ್ರಿಕ್ಲಬ್ ಬಳಿ ಪ್ರವಾಸಿಗರ ಕಿಡ್ನಾಪ್
1 min read
ಚಾಮರಾಜನಗರ : ಹಾಡಹಗಲೇ ಬಂಡೀಪುರ ಬಳಿಯ ಕಂಟ್ರಿಕ್ಲಬ್ ಬಳಿ ದಂಪತಿ ಹಾಗೂ ಮಗುವನ್ನು ಕಿಡ್ನಾಪ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ನಿವಾಸಿ ನಿಶಾಂತ್ ಬಿಬಿಎಂಪಿಯ ಎಫ್‌ಡಿಎ ಎಂಬ ಹೆಸರಿನಲ್ಲಿ ರೆಸಾಟ್೯ ಬುಕ್ ಮಾಡಿದ್ದ ನಿಶಾಂತ್ ಹಾಗೂ ಅವರ ಪತ್ನಿ, ಮಗುವಿದ್ದ ಕಾರಿನಲ್ಲಿ ಕಂಟ್ರಿ ಕ್ಲಬ್ ನಿಂದ ತೆರಳುತ್ತಿದ್ದಾಗ ಕ್ಲಬ್ ಅನತಿ ದೂರದಲ್ಲೇ ತಡೆದು, ಅಡ್ಡಗಟ್ಟಿ ನಿಶಾಂತ್ ಕಾರಿನಿಂದ ದಂಪತಿ ಹಾಗೂ ಮಗುವನ್ನು ಇಳಿಸಿ ಕಾರಿನಲ್ಲಿ ಕೂರಿಸಿಕೊಂಡು ಮೈಸೂರು ಕಡೆ ಹೋಗಿದ್ದಾರೆ ಎನ್ನಲಾಗಿದೆ. ಕಂಟ್ರಿ ಕ್ಲಬ್ ಮ್ಯಾನೇಜರ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಕವಿತಾ ಹಾಗೂ ಗುಂಡ್ಲುಪೇಟೆ ಪೊಲೀಸರು ಕಂಟ್ರಿಕ್ಲಬ್‌ಗ ಭೇಟಿ ನೀಡಿ ಅಪಹರಣಕ್ಕೊಳಗಾದ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪೋಲಿಸರ ತನಿಖೆ ವೇಳೆಯಲ್ಲಿ ಬೆಂಗಳೂರಿನ ಬಿಬಿಎಂಪಿ ನೌಕರ ಎಂದು ಎಂದು ಸುಳ್ಳು ಹೇಳಿ ಹೆಸರು ದಾಖಲಿಸಿದ್ದಾರೆ. ನಿಶಾಂತ್ ದಂಪತಿ ಮಾ.1 ರಂದು ಕಂಟ್ರಿ ಕ್ಲಬ್ ನಲ್ಲಿ ತಂಗಿದ್ದರು. ಸೋಮವಾರ ಬೆಳಗ್ಗೆ ಉಪಹಾರ ಸೇವಿಸಿ ಹೊರಗಡೆ ಹೋಗುವಾಗ ಕಿಡ್ನಾಪ್ ನಡೆದಿದೆ ಎನ್ನಲಾಗಿದೆ.. ಆದರೆ ಕ್ಲಬ್ ವಸತಿ ಪಡೆಯುವಾಗ ನಿಶಾಂತ್ ಬಿಬಿಎಂಪಿ ಎಫ್‌ಡಿಎ ಎಂದು ಬುಕ್ ಮಾಡಿದ್ದಾನೆ. ಆದರೆ ಆತ ಬಿಬಿಎಂಪಿ ನೌಕರನಲ್ಲ ಎಂದು ತಿಳಿದು ಬಂದಿದು ನಿಶಂತ್ ಮೇಲೆ ಅನುಮಾನ ಇದೀಗ ಪೋಲೀಸರಲ್ಲಿ ಮೂಡಿದೆ. ಕಿಡ್ನಾಪ್ ಮಾಡಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ನಿಶಾಂತ್ ರೂಂನಲ್ಲಿ ಮುತ್ತೂಟ್ ಫೈನಾನ್ಸ್ ಚೀಟಿ ಸಿಕ್ಕಿದೆ. ಮುತ್ತೂಟ್ ಬ್ಯಾಂಕ್‌ನಲ್ಲಿ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
