c24kannada

ವಸ್ತುಸ್ಥಿತಿಯತ್ತ

ಹವಾಮಾನ ಇಲಾಖೆಯಿಂದ ಉದ್ಯಾನನಗರಿ ಬೆಂಗಳೂರಿನ ಭಾರೀ ಬಿಸಿಲಿನ ವಾತಾವರಣದ ಬಗ್ಗೆ ಎಚ್ಚರಿಕೆ

Share it

 

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ವರ್ಷ ಪೂರ್ತಿ ಒಂದೇ ರೀತಿಯ ವಾತಾವರಣ ಇರುವ ಸುಂದರ ನಗರ. ಅದಕ್ಕೆ ಇದನ್ನ ಗಾರ್ಡನ್ ಸಿಟಿ ಅಂತ ಕರೆಯಲಾಗುತ್ತೆ. ಆದ್ರೀಗ ಉದ್ಯಾನನಗರಿ ಸಖತ್‌ ಹಾಟ್ ಸಿಟಿಯಾಗಿ ಬದಲಾಗುತ್ತಿದೆ. ಈ ವರ್ಷ ಬೆಂಗಳೂರು ಬಹುದಿನಗಳ ನಿರಂತರ ಶಾಖದ ಅಲೆಗೆ ಸಾಕ್ಷಿಯಾಗುತ್ತಿದೆ. ಹವಾಮಾನ ಇಲಾಖೆ ಬೆಂಗಳೂರಿನ ಭಾರೀ ಬಿಸಿಲಿನ ವಾತಾವರಣದ ಬಗ್ಗೆ ಎಚ್ಚರಿಕೆ ನೀಡಿದೆ.

 

ಮುಂದಿನ ಒಂದು ವಾರ ರಾಜಧಾನಿ ಬೆಂಗಳೂರಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇಷ್ಟು ದಿನ ಬಿಸಿಲ ವಾತಾವರಣ ಇರುವ ನಗರಿಗೆ ಇನ್ಮುದೆ ಬಿಸಿ ಗಾಳಿ ಸೃಷ್ಟಿಯಾಗುತ್ತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬರೀ ಒಂದು ವಾರ ಅಷ್ಟೇ ಅಲ್ಲ ಮುಂದಿನ ಎರಡು ತಿಂಗಳು ಬಿಸಿಲ ಬೇಗೆಯಿಂದ ಬಳಲು ಸಿಲಿಕಾನ್ ಸಿಟಿಯ ಜನ ಸಿದ್ಧರಾಗಬೇಕು ಎನ್ನಲಾಗಿದೆ. ಮಾರ್ಚ್ 10ರಿಂದ 17ರವರೆಗೂ ಅತ್ಯಧಿಕ ತಾಪಮಾನ ಬೆಂಗಳೂರನ್ನು ಆವರಿಸಲಿದೆ. ಪ್ರತಿದಿನ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಅಲರ್ಟ್ ನೀಡಿದೆ. ಸಿಲಿಕಾನ್ ಸಿಟಿಯಲ್ಲದೇ ಇಡೀ ಕರುನಾಡಲ್ಲಿ ತಾಪಮಾನ ಏರುಪೇರಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಬಂದಿದ್ರೂ ಬೆಂಗಳೂರಿನಲ್ಲಿ ಮಳೆ ಸುಳಿವು ನೀಡಿಲ್ಲ. ಹೀಗಾಗಿ ಬೆಂಗಳೂರಲ್ಲಿ ಇನ್ನೊಂದು ವಾರ ಉಷ್ಣಾಂಶ ಹೆಚ್ಚಾಗಲಿದೆ.

 

ಉದ್ಯಾನನಗರಿ ಬೆಂಗಳೂರಲ್ಲಿ ಇಷ್ಟು ಬಿಸಿಲಿನ ಶಾಖ ಹೆಚ್ಚಾಗಲು ಕಾರಣ ಏನು ಅಂತ ನೋಡೋದಾದ್ರೆ, ಅತಿಯಾದ ತಾಪಮಾನ, ಮಳೆ ಕೊರತೆ, ಅಂತರ್ಜಲ ಕುಸಿತವೇ ಪ್ರಮುಖವಾಗಿದೆ. ಬೆಂಗಳೂರಲ್ಲಿ ಹಸಿರು ಹೊದಿಕೆ ಹೆಚ್ಚಿಸುವುದರ ಜೊತೆಗೆ ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ.

Loading

Leave a Reply

Your email address will not be published. Required fields are marked *

error: Content is protected !!