[t4b-ticker]

ಬ್ರಹ್ಮರಥವನ್ನೇರಿ ಗರ್ಭಗುಡಿಯಿಂದ ಆಚೆ ಬಂದ ಹೊರನಾಡು ಅನ್ನಪೂರ್ಣೇಶ್ವರಿ

1 min read
Share it

 

ಆದಿಶಕ್ತಿ ಅನ್ನಪೂರ್ಣೇಶ್ವರಿ  ವರ್ಷಪೂರ್ತಿ ಗರ್ಭಗುಡಿಯಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ,  ವರ್ಷದಲ್ಲೊಮ್ಮೆ ಭಕ್ತರಿರೋ ಜಾಗಕ್ಕೆ ಬಂದು ಭಕ್ತರನ್ನ ನೋಡಿ ಅನ್ನಪೂರ್ಣೇಶ್ವರಿ  ಅನುಗ್ರಹಿಸ್ತಾಳೆ.. ಈ ನಂಬಿಕೆಯಂತೆ ನಿನ್ನೆ ಅನ್ನಪೂರ್ಣೇಶ್ವರಿ ಮಹಾರಥವನ್ನೇರಿ ದರ್ಶನ ಭಾಗ್ಯ ನೀಡಿದಳು.. ಸಾವಿರಾರು ಭಕ್ತರು ರಥವನ್ನ ಏಳೆಯೋ ಮೂಲಕ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.. ದೇವಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂತ್ತು.

 

ಕಾಫಿನಾಡಿನ ಆದಿಶಕ್ತಿ ಹೊರನಾಡು ಅನ್ನಪೂರ್ಣೇಶ್ವರಿಗೆ ವಾರ್ಷಿಕ ಜಾತ್ರಾ ಮಹೋತ್ಸವದ ಸಂಭ್ರಮ ಜೋರಾಗಿತ್ತು. ವರ್ಷಕ್ಕೊಮ್ಮೆ ಗರ್ಭಗುಡಿಯಿಂದ ಹೊರಗೆ ಬಂದು ಬ್ರಹ್ಮ ರಥವನ್ನೇರಿ. ಭಕ್ತರನ್ನ ತನ್ನ ಜಾತ್ರ ಮಹೋತ್ಸವದಲ್ಲಿ ಮಿಂದೇಳುವಂತೆ ಮಾಡಿದಳು ಆ ತಾಯಿ ಅನ್ನಪೂರ್ಣೇಶ್ವರಿ.ರಥೋತ್ಸವಕ್ಕೂ ಮುನ್ನ ಮುಂಜಾನೆಯಿಂದಲೇ ಗರ್ಭಗುಡಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದ್ವು.. ನಂತರ ಅಭಿಜಿತ್ ಲಗ್ನದಲ್ಲಿ ಉತ್ಸವ ಮೂರ್ತಿಯನ್ನ ದೇವಸ್ಥಾನ ಒಳಭಾಗದಲ್ಲಿ ಮೂರು ಸುತ್ತ ಪ್ರದಕ್ಷಿಣೆ ಹಾಕಿಸಿ ರಥದ ಸಮೀಪ ತರಲಾಯ್ತು. ರಥಕ್ಕೆ ಪ್ರದಕ್ಷಿಣೆ ಹಾಕಿ ರಥವನ್ನೇರುತ್ತಿದ್ದಂತೆ ಜೈಕಾರ ಘೋಷಣೆಗಳು ಮೊಳಗಿದ್ವು. ಇದೇ ವೇಳೆ ಭಕ್ತರು ಕಾಫಿ.. ಏಲಕ್ಕಿ.. ಕಾಳುಮೆಣಸು.. ಅಡಿಕೆಯನ್ನ ದೇವರಿಗೆ ಹರಕೆಯ ರೂಪದಲ್ಲಿ ಅರ್ಪಿಸಿದರು..

 

ವಾಧ್ಯಘೋಷ.. ಡೋಲುಗಳ ನಾದ.. ವೀರಗಾಸೆ ಕುಣಿತದೊಂದಿಗೆ ರಥೋತ್ಸವ ವಿಜೃಂಭಣೆಯಿಂದ ಸಾಗಿತು. ರಥದ ಮುಂದೆ ಚಾಮರಗಳನ್ನ ಹಿಡಿದು ಸಾಗಿದ್ರೆ.. ದೇವಾಲಯದ ಮುಂಭಾಗದಲ್ಲಿ ಬ್ರಹ್ಮ ರಥವನ್ನ ಭಕ್ತರು ಏಳೆದ್ರು. ರಥಕ್ಕೆ ಮಲೆನಾಡಿನ ಬೆಳೆಗಳನ್ನು ಸಮರ್ಪಿಸಿದ್ರೆ.. ಈ ಭಾರಿ ಉತ್ತಮ ಬೆಳೆಯಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿ ಎದ್ದು ಕಾಣ್ತಿತ್ತು. ಹೊರನಾಡು ಅನ್ನಪೂರ್ಣೇಶ್ವರಿಯ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾರಥೋತ್ಸದಲ್ಲಿ ಭಕ್ತಸಾಗರವೇ ಸೇರಿ, ತಾಯಿಯ ಕೃಪೆಗೆ ಪಾತ್ರರಾದರು.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?