ಮೋದಿ ಹಣ ಕೊಡಿಸುತ್ತೇನೆ ಎಂದು ನಂಬಿಸಿ ಮಾಂಗಲ್ಯ ಸರ ಎಗಿರಿಸಿದ್ದ ಆರೋಪಿ ಬಂಧನ
1 min read
ಚಿಂತಾಮಣಿ : ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿದ್ದ ಅಜ್ಜಿ ಲಕ್ಷ್ಮಿದೇವಮ್ಮ ರವರಿಗೆ ಮೋದಿ ಹಣ ಕೊಡುತ್ತಿದ್ದಾರೆ ನಿಮಗೆ ಐದು ಸಾವಿರ ರೂ.ಗಳು ಹಣ ಕೊಡುತ್ತೇನೆ ಬಾ ಎಂದು ಹೇಳಿ ನಂಬಿಸಿ ಆಕೆಯ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಕೊನೆಗೆ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
07 ಫೆಬ್ರವರಿ 2025 ರಂದು ಚಿಂತಾಮಣಿ ತಾಲ್ಲೂಕು ಪಾಪತಿಮ್ಮನಹಳ್ಳಿ ಗ್ರಾಮದ ಸುಮಾರು 82 ವರ್ಷದ ವಯಸ್ಸಿನ ಲಕ್ಷ್ಮಿದೇವಮ್ಮ ಎಂಬುವರು ಊರಿಗೆ ಹೋಗಲು ಚಿಂತಾಮಣಿ ನಗರದಲ್ಲಿ ಸಿವಿಲ್ ಬಸ್ ಸಿಗದ ಕಾರಣ ಸಿವಿಲ್ ನಿಲ್ದಾಣದಿಂದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿದ್ದಾಗ 35-40 ವರ್ಷದ ಅಪರಿಚಿತ ವ್ಯಕ್ತಿ ಬಂದು ಲಕ್ಷ್ಮಿದೇವಮ್ಮ ಳನ್ನು ಮೋದಿ ಹಣ ಕೊಡುತ್ತಿದ್ದಾರೆ ನಿಮಗೆ 5000 ರೂಗಳು ಹಣ ಕೊಡುತ್ತೇನೆ ಬಾ ಎಂದು ಹೇಳಿ ನಂಬಿಸಿ ಕರೆದುಕೊಂಡು ಹೋಗಿ ಆಕೆಯಾ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಬಿಚ್ಚಿ ಪಾರ್ಸಲ್ ನಲ್ಲಿ ಇಟ್ಟುಕೊಂಡು, ಸುಮಾರು 25 ಗ್ರಾಂ ತೂಕದ ಸುಮಾರು ಎರಡು ಲಕ್ಷ ರೂಗಳು ಬೆಲೆಬಾಳುವ ಬಂಗಾರದ ಮಾಂಗಲ್ಯ ಚೈನ್ ಕಳವು ಮಾಡಿಕೊಂಡು ಪರಾರಿಯಾಗಿದ್ದ.
ಘಟನೆ ಕುರಿತು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಕುಶಾಲ್ ಚೌಕ್ಸೆ, ಎಎಸ್‌ಪಿ ರಜಾ ಇಮಾಮ್ ಖಾಸಿಂ, ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರುಳಿಧರ್,ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವೀಜಿ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಆ ತಂಡ ನಗರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಗಳು ಪರಿಶೀಲನೆ ನಡೆಸಿ ಆರೋಪಿಯ ಗುರುತನ್ನು ಪತ್ತೆ ಹಚ್ಚಿ ಕಳುವು ಪಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮಂಜೇಶ್ ಅಲಿಯಾಸ್ ಹೊಟ್ಟೆ ಮಂಜ(40 ವರ್ಷ) ತರಬಹಳ್ಳಿ ಪೋಸ್ಟ್, ನೆಲಮಂಗಲ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವನನ್ನು ಬಂಧಿಸಿ ಕಳುವಾಗಿದ್ದ ಸುಮಾರು 2 ಲಕ್ಷ ಬೆಲೆ ಬಾಳುವ 24 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಚೈನ್ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಮತ್ತು ಕಳುವಾದ ಮಾಂಗಲ್ಯದ ಸರವನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದ್ದವರನ್ನು ಜಿಲ್ಲಾ ವರಿಷ್ಟಾಧಿಕಾರಿಗಳಾದ ಕುಶಾಲ್ ಚೌಕ್ಸೆರವರು ಪ್ರಶಂಸೆ ಪತ್ರವನ್ನು ನೀಡಿ ಅಭಿನಂದಿಸಿದ್ದಾರೆ.
