ಟ್ಯಾಟೂ, ಲಿಪ್ಸ್ಟಿಕ್ ಬಳಿಕ ಇದೀಗ ಮೆಹೆಂದಿಯಲ್ಲೂ ಅಪಾಯಕಾರಿ ಅಂಶ ಪತ್ತೆ..!
1 min read
ಟ್ಯಾಟೂ , ಲಿಪ್ಸ್ಟಿಕ್ ಬಳಿಕ ಮೆಹೆಂದಿಯಲ್ಲೂ ಅಪಾಯಕಾರಿ ಅಂಶ ಪತ್ತೆಯಾಗಿದೆ. ಕಳಪೆ ಗುಣಮಟ್ಟದ ಮೆಹೆಂದಿಯಿಂದ ಚರ್ಮ ರೋಗ, ಸ್ಕಿನ್ ಅಲರ್ಜಿ, ಕಡಿತದಂತಹ ಸಮಸ್ಯೆಯಿಂದ ಜನರು ಬಳಲುತ್ತಿರುವುದರಿಂದ ಮೆಹೆಂದಿ ಮೇಲೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಚಿಂತನೆ ನಡೆಸುತ್ತಿದ್ದಾರೆ. ಮೆಹಂದಿ ಬಳಕೆ ವಿಚಾರವಾಗಿ ಈಗಾಗಲೇ ಸಾವಿರಾರು ದೂರುಗಳು ಆರೋಗ್ಯ ಇಲಾಖೆಗೆ ಬಂದಿದ್ದು, ಬ್ರ್ಯಾಂಡ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಮೆಹಂದಿ ಪೌಡರ್, ಐ ಲೈನರ್, ಕಾಜಲ್ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ, ಮೆಹಂದಿಯನ್ನೂ ಕೂಡ ಕೇಂದ್ರ ಸರ್ಕಾರದ ಅಧಿನಿಯಮಕ್ಕೆ ಒಳಪಡಿಸುವಂತೆ ಆರೋಗ್ಯ ಇಲಾಖೆ ಪತ್ರ ಬರೆದಿದೆ.
ಆರೋಗ್ಯ ಇಲಾಖೆ ಈಗಾಗಲೆ ನಕಲಿ ಪ್ರಾಡೆಕ್ಟ್ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ವಿಚಾರ ಬಹಿರಂಗಗೊಂಡಿದೆ. ರಸ್ತೆ ಬದಿ ಬ್ರ್ಯಾಂಡ್ ಹೆಸರಿನ ಪ್ರಾಡಕ್ಟ್ ಖರೀದಿಸದಂತೆ ಆರೋಗ್ಯ ಇಲಾಖೆ ಸಲಹೆ ನೀಡಿದ್ದಾರೆ. ಇನ್ನು, ಅವಧಿ ಮುಗಿದ ಕಾಸ್ಮೆಟಿಕ್ಸ್ಗಳನ್ನು ಬಳಸುವುದರಿಂದ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದ್ಧಾರೆ.
