[t4b-ticker]

ದೇವಭೂಮಿ ಉತ್ತರಾಖಂಡ್​​ನ ಬದ್ರಿನಾಥ್​​ನಲ್ಲಿ ಭಾರೀ ಹಿಮಪಾತ..ಹಿಮದಡಿ ಸಿಲುಕಿದ್ದ 57 ಮಂದಿ ಪೈಕಿ 16 ಜನರು ಮಾತ್ರ ರಕ್ಷಣೆ

1 min read
Share it

ದೇವಭೂಮಿ ಉತ್ತರಾಖಂಡ್​​ನ ಬದ್ರಿನಾಥ್​​ನಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ಹೆದ್ದಾರಿ ಕಾಮಗಾರಿಯಲ್ಲಿ ನಿರತರಾಗಿದ್ದ 57 ಕಾರ್ಮಿಕರು ಹಿಮದಡಿ ಸಿಲುಕಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಹಿಮದಡಿ ಸಿಲುಕಿದ್ದ 57 ಮಂದಿಯ ಪೈಕಿ 16 ಜನರನ್ನು ಮಾತ್ರ ರಕ್ಷಣೆ ಮಾಡಲಾಗಿದೆ. ಉಳಿದ 41 ಕಾರ್ಮಿಕರನ್ನು ರಕ್ಷಿಸಲು ಸೇನೆ & ಪೊಲೀಸರು ಹರಸಾಹಸ ಪಡುತ್ತಿದ್ದಾರೆ.ಇಂದು ಬೆಳಗ್ಗೆ 7.15ರ ಸುಮಾರಿಗೆ ಈ ಹಿಮಪಾತ ಸಂಭವಿಸಿದೆ. ಬದ್ರಿನಾಥ್ ಮತ್ತು ಮನ ಮಧ್ಯೆ ಬರುವ ಹೆದ್ದಾರಿ ಕಾಮಗಾರಿಯಲ್ಲಿ BROನ 57 ಕಾರ್ಮಿಕರು ನಿರತರಾಗಿದ್ದರು. ಹಿಮಪಾತದಲ್ಲಿ 8 ಕಂಟೈನರ್ಸ್ ಮತ್ತು ಒಂದು ಶೆಡ್‌ ಕೂಡ ಮುಳುಗಡೆಯಾಗಿದೆ.ಭಾರತೀಯ ಸೇನೆಯ 100 ಸಿಬ್ಬಂದಿಗಳು ಹಿಮಪಾತದ ಪ್ರದೇಶದಲ್ಲಿ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ವೈದ್ಯರು, ಆ್ಯಂಬುಲೆನ್ಸ್ ಸೇರಿದಂತೆ ಎಲ್ಲಾ ಅಗತ್ಯ ಸೇವೆ ನೀಡುವ ಕಾರ್ಯಾಚರಣೆ ಮುಂದುವರಿದಿದೆ.

 

7 ಕಾರ್ಮಿಕರಲ್ಲಿ 10 ಮಂದಿ ಜೀವಂತವಾಗಿ ಸಾವನ್ನೇ ಗೆದ್ದು ಬಂದಿದ್ದಾರೆ. ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ. ಹಿಮಪಾತದಲ್ಲಿ 3 ಕಂಟೈನರ್ಸ್‌ಗಳಲ್ಲಿದ್ದವರ ಸುಳಿವು ಸಿಕ್ಕಿಲ್ಲ. ಭಾರೀ ಹಿಮಪಾತ ಮುಂದುವರಿದಿದ್ದು, ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.ಹಿಮಪಾತದ ಪ್ರದೇಶದಲ್ಲಿ ಕಂಡು ಬರುತ್ತಿರುವ ಒಂದೊಂದು ದೃಶ್ಯವೂ ಭಯಾನಕ ವಾಗಿದ್ದು, ಕ್ಷಣ, ಕ್ಷಣಕ್ಕೂ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?