ಬಸ್‌ನಲ್ಲಿ ರಾಕ್ಷಸ ಕೃತ್ಯ.. ಕಿರಾತಕ ಸಿಕ್ಕಿಬಿದ್ದಿದ್ದೇ ರೋಚಕ!
1 min read
ಅಕ್ಕ, ಅಕ್ಕ ಎಂದು ಮಹಿಳೆಯನ್ನು ಬಸ್ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ರಾಕ್ಷಸ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಪುಣೆ ಬಸ್‌ನಲ್ಲಿ ನಡೆದ ರಾಕ್ಷಸ ಕೃತ್ಯದ ಆರೋಪಿ ದತ್ತಾತ್ರಯ ರಾಮದಾಸ ಗಾದೆಯನ್ನು ಪೊಲೀಸರು ಬಂಧಿಸಿದ್ದಾರೆ. ಸತತ 75 ಗಂಟೆಗಳ ಕಾಲ ನಡೆದ ಪೊಲೀಸರ ಬೇಟೆಗೆ ಕೊನೆಗೂ ಫಲ ಸಿಕ್ತು.
ಫೆಬ್ರವರಿ 25ರಂದು ದತ್ತಾತ್ರಯ ರಾಮದಾಸ ಗಾದೆ, 26 ವರ್ಷದ ಮಹಿಳೆಯನ್ನು ಸ್ವರ್ಗೇಟ್ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದ. ಪೊಲೀಸ್ ಠಾಣೆಗೆ 100 ಮೀಟರ್ ದೂರದಲ್ಲಿರುವ ಖಾಲಿ ಬಸ್ ಒಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಬೆಳಗಿನ ಜಾವ 5.45ರಿಂದ 6 ಗಂಟೆಯ ಅವಧಿಯಲ್ಲಿ ಈ ಘಟನೆ ನಡೆದಿತ್ತು. ದೇಶಾದ್ಯಂತ ಈ ಪ್ರಕರಣಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಸ್‌ನಲ್ಲಿ ಸಿಕ್ಕ ಬಟ್ಟೆಯ ಸುಳಿವು ಹಿಡಿದು ಹೊರಟ ಪೊಲೀಸರಿಗೆ ಕಾಮುಕನ ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿತ್ತು.
ಪುಣೆ ಬಸ್ ಕಾಮುಕನ ಬಂಧಿಸಲು 13 ಸ್ಪೆಷಲ್ ತಂಡದಲ್ಲಿ ಬರೋಬ್ಬರಿ 100 ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಈತನ ಸುಳಿವಿಗಾಗಿ ಹುಡುಕಾಡಿದರೂ ಈ ಖದೀಮ ಪತ್ತೆಯಾಗಿರಲಿಲ್ಲ. ಇಡೀ ಪುಣೆಯನ್ನು ಹುಡುಕಾಡಿದ ಬಳಿಕ ಪೊಲೀಸರಿಗೆ ದತ್ತಾತ್ರಯ ರಾಮದಾಸ ಗಾದೆ ಕಬ್ಬಿನ ಗದ್ದೆಗಳಲ್ಲಿ ಅವಿತುಕೊಂಡಿರುವ ಅನುಮಾನ ವ್ಯಕ್ತವಾಗಿತ್ತು. ಕಬ್ಬಿನ ಗದ್ದೆಗಳಲ್ಲಿ ಆರೋಪಿಯ ಶೋಧಕ್ಕಾಗಿ ಪೊಲೀಸರು ಡ್ರೋನ್ ಬಳಕೆ ಮಾಡಿದ್ದರು. ಆರೋಪಿಯ ಹುಟ್ಟೂರು ಗುಣತ್‌ನ ಎಲ್ಲಾ ಕಬ್ಬಿನ ಗದ್ದೆಯಲ್ಲೂ ಹುಡುಕಾಡಲಾಗಿದೆ.
ಕೊನೆಗೆ ಕಿರಾತಕನ ಪತ್ತೆಗಾಗಿ ಶ್ವಾನ ದಳ ಅಖಾಡಕ್ಕೆ ಇಳಿದಿದೆ. ಕೃತ್ಯ ನಡೆದ ಜಾಗದಲ್ಲಿ ಸಿಕ್ಕ ಬಟ್ಟೆಯ ವಾಸನೆ ಹಿಡಿದ ಶ್ವಾನ ದಳ ಆರೋಪಿಯ ಜಾಡು ಹಿಡಿದು ಹೊರಟಿದೆ. ಆರೋಪಿ ಶರ್ಟ್‌ನ ವಾಸನೆ ಹಿಡಿದ ಶ್ವಾನ ದಳ
ಶ್ರೀರೂರ್‌ನ ತಹಸಿಲ್‌ನಲ್ಲಿ ಆರೋಪಿ ಇರೋದನ್ನ ಪತ್ತೆ ಹೆಚ್ಚಿದೆ.
