ತುಂಡಾಗಿ ಬೇರ್ಪಟ್ಟಿದ್ದ ಹುಡುಗನ ತಲೆ ಮರು ಜೋಡಣೆ; ವೈದ್ಯರ ಶಸ್ತ್ರ ಚಿಕಿತ್ಸೆಯೇ ‘ಮಿರಾಕಲ್’
1 min read
ಇಡೀ ವೈದ್ಯಕೀಯ ಲೋಕವೇ ಹೆಮ್ಮೆಪಡುವ ವಿಚಾರವಾಗಿದೆ. ಈ ವೈದ್ಯರ ತಂಡ ಮಾಡಿರೋ ಸಾಹಸಕ್ಕೆ ಧನ್ಯವಾದ ತಿಳೀಸಬೇಕು. ಅಪಘಾತದಲ್ಲಿ ದೇಹದಿಂದ ಬೇರೆಯಾಗಿದ್ದ ಬಾಲಕನ ತಲೆಯನ್ನು ಮರು ಜೋಡಣೆ ಮಾಡುವ ಮೂಲಕ ಇಸ್ರೇಲ್ ವೈದ್ಯರು ದಾಖಲೆ ಮಾಡಿದ್ದಾರೆ. ಇಂತಹ ಶಸ್ತ್ರ ಚಿಕಿತ್ಸೆಯನ್ನು ಬಿಲಾಟರಲ್ ಅಟ್ಲಾಂಟೊ ಆಕ್ಸಿಪಿಟಲ್ ಜಾಯಿಂಟ್ ಡಿಸ್‌ಲೊಕೇಷನ್ ಎಂದು ವೈಜ್ಞಾನಿಕವಾಗಿ ಕರೆಯುತ್ತಾರೆ. ಅಪರೂಪದ ಈ ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸರೋ ಈ ವೈದ್ಯರ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
ಸುಲೈಮನ್ ಹಾಸನ್ ಎಂಬ ಈ ೧೨ ವರ್ಷದ ಬಾಲಕ ಬೈಕ್‌ನಲ್ಲಿ ಹೋಗುವಾಗ ಅಪಘಾತವಾಗಿದ್ದು, ಬೈಕ್, ಕಾರಿಗೆ ಗುದ್ದಿದ್ದು ಅಪಘಾತದಲ್ಲಿ ಹಾಸನ್ ಕುತ್ತಿಗೆ ಮುರಿದುಕೊಂಡಿತ್ತು. ಕೂಡಲೇ ಸುಲೈಮನ್ ಹಾಸನ್ ಅನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಬಾಲಕನನ್ನು ಪರೀಕ್ಷೆ ನಡೆಸಿದ ವೈದ್ಯರು, ಬಾಲಕನ ತಲೆಯು ಕತ್ತಿನ ಮೂಳೆಯಿಂದ ಸಂಪೂರ್ಣ ಬೇರ್ಪಟ್ಟಿದೆ ಎಂದು ಹೇಳಿದ್ದರು. ಇಷ್ಟಾದ್ರೂ ಸುಲೈಮನ್ ಹಾಸನ್‌ರನ್ನು ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಲವಾರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಲಾಯ್ತು. ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಇಸ್ರೇಲ್‍ನ ವೈದ್ಯರು ಈ ಆಪರೇಷನ್‌ಗೆ ಕೈ ಜೋಡಿಸಿದರು. ನುರಿತ ಮೂಳೆ ಶಸ್ತ್ರಚಿಕಿತ್ಸಕರು ಈ ಪ್ರಯೋಗ ನಡೆಸಿದರು. ಅಪಘಾತದಲ್ಲಿ ಬಾಲಕನ ತಲೆಯೇ ಬೇರ್ಪಟ್ಟಿದ್ದ ಪ್ರಕರಣದಲ್ಲಿ, ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ತಲೆ ಮರು ಜೋಡಣೆ ಮಾಡಿದರು.
ಇಸ್ರೇಲ್‌ನಲ್ಲಿ ಈ ಬಾಲಕನ ಶಸ್ತ್ರಚಿಕಿತ್ಸೆಯು ಕಳೆದ ತಿಂಗಳೇ ನಡೆದಿದೆ. ಬಾಲಕ ಪೂರ್ತಿ ಹುಷಾರಾಗುವವರೆಗೂ ಈ ವಿಷಯವನ್ನು ವೈದ್ಯರು ಬಹಿರಂಗಪಡಿಸಿರಲಿಲ್ಲ. ಸದ್ಯ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಎಲ್ಲರಂತೆ ಆತ ಓಡಾಡುತ್ತಿದ್ದಾನೆ. ವೈದ್ಯರ ಈ ಪ್ರಯೋಗಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಚೇತರಿಕೆಯಾಗಿರೋ ಬಾಲಕನ ಪೋಷಕರಿಗೆ ವೈದ್ಯರಿಗೆ ಕೃತಜ್ಞತೆಯನ್ನು ತಿಳಿಸಿದರು.
