ಯಡಿಯೂರಪ್ಪ ಬರ್ತಡೇಗೆ ವಿಷ್ ಮಾಡಿದ್ರಾ ಎಂಬ ಪ್ರಶ್ನೆಗೆ ಈಶ್ವರಪ್ಪ ಉತ್ತರ
1 min read
ಶಿವಮೊಗ್ಗ : ಯಡಿಯೂರಪ್ಪ ಬರ್ತಡೇಗೆ ವಿಷ್ ಮಾಡಿದ್ರಾ ಎಂಬ ಪ್ರಶ್ನೆಗೆ ಈಶ್ವರಪ್ಪ ಉತ್ತರ ನೀಡಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ನಮ್ಮ ಗುರುಗಳು ಕಂಡ್ರೀ, ಅವರಿಗೆ ನಾನು ವಿಷ್ ಮಾಡ್ಬೇಕಾ !? ನಾವು ಮನೆಯಲ್ಲಿ ಹೋಗಿ ಅಪ್ಪನಿಗೆ ನಿಮಗೆ ಒಳ್ಳೆದಾಗ್ಲಿ ಅಂತಾ ಹೇಳ್ತಿವಾ !? ಅಥವಾ ನೀವು ಹೋಗಿ ಯಾರಾದ್ರೂ ಹೇಳ್ತಿರಾ ? ನಾನು ಈ ಸ್ಥಿತಿಯಲ್ಲಿದ್ದೆನೆ ಎಂಬುದಕ್ಕೆ ಯಡಿಯೂರಪ್ಪ ಹಾಗೂ ಆರ್.ಎಸ್.ಎಸ್. ಕಾರಣ ನಮ್ಮನ್ನು ಬೆಳೆಸಿದ ತಂದೆ, ತಾಯಿಗೆ ಹೋಗಿ ಅಪ್ಪಾ ಹ್ಯಾಪಿ ಬರ್ತಡೇ ಅಂತಾ ಹೇಳ್ತಿವಾ !? ಪ್ರತಿಯೊಂದರಲ್ಲೂ ರಾಜಕಾರಣ ನೋಡುವುದು ಬಿಡುವುದು ಒಳ್ಳೆಯದು. ನಾನ್ಯಾಕೆ ಯಡಿಯೂರಪ್ಪ ಬರ್ತಡೇ ಮರೆಯಲಿ, ನಾನು ಪ್ರತಿ ದೀಪಾವಳಿಗೆ ನಮ್ಮ ತಂದೆ, ತಾಯಿ ಫೋಟೋ ಇಟ್ಟು ಹಿರಿಯರ ಪೂಜೆ ಮಾಡ್ತಿನಿ ಅದನ್ನ ನಾನು ಮರಿತು ಬೀಡುವೆನ ಎಂದ ಈಶ್ವರಪ್ಪ ಹೇಳಿದರು.
