
ತುಮಕೂರು : ಗುಂಡಿಗೆ ಬಿದ್ದು ಬೈಕ್ ಸವಾರ ಸಾವಪ್ಪಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರಿಂದ ದಿಢೀರ್ ಪ್ರತಿಭಟನೆ ನಡೆಸುತ್ತಿದ್ದಾರೆ. ನೂರಾರು ಜನ ಗ್ರಾಮಸ್ಥರಿಂದ ತುಮಕೂರು ಜಿಲ್ಲೆ ಶಿರಾ- ಅಮರಾಪುರ ರಸ್ತೆಯ ತೊಗರುಗುಂಟೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಯಮ ಸ್ವರೂಪಿ ಗುಂಡಿಗಳಿಂದ ನಿತ್ಯ ನಿಲ್ಲದ ಅಪಘಾತಗಳು ಎಂದು ಶಿರಾ ಅಮರಾಪುರ ರಸ್ತೆ ಶೀಘ್ರ ದುರಸ್ತಿಗೆ ಮೃತನ ಭಾವಚಿತ್ರದ ಪ್ಲೆಕ್ಸ್ ಹಿಡಿದು ಪ್ರತಿಭಟನೆ ನಡೆಸಿದರು.
ಕಳೆದ ರಾತ್ರಿ ಲಿಂಗದಹಳ್ಳಿ ಗೇಟ್ ಬಳಿ ತೊಗರುಗುಂಟೆಯ ಮೋಹನ್ ರಸ್ತೆ ಗುಂಡಿಯಿಂದ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಪ್ರತಿಭಟನಾ ಸ್ಥಳಕ್ಕೆ ಪಿಡಬ್ಲ್ಯೂಡಿ ಎಇಇ ರಮೇಶ್, ಶಿರಾ ಡಿವೈಎಸ್ ಪಿ ಶೇಖರ್, ಸಿಪಿಐ ಮಂಜೇಗೌಡ ಭೇಟಿ ನೀಡಿದರು, ಅಧಿಕಾರಿಗಳು ಮೂರು ದಿನದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿದರು. ತೊಗರುಗುಂಟೆ ಹಾಗೂ ಸುತ್ತಮುತ್ತ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
