ಮಹಾಶಿವರಾತ್ರಿ ಹಿನ್ನೆಲೆ, ವಿವಿಧ ದೇಗುಲಗಳಲ್ಲಿ ವಿಶೇಷ ಪೊಜೆ
1 min read
ಹುಬ್ಬಳ್ಳಿ : ಮಹಾಶಿವರಾತ್ರಿ ಹಿನ್ನೆಲೆ, ಹುಬ್ಬಳ್ಳಿಯಲ್ಲಿ ವಿವಿಧ ದೇಗುಲಗಳಲ್ಲಿ ವಿಶೇಷ ಪೊಜೆ ನಡೆಯುತಿದೆ. ಬೆಳಗಿನ ಜಾವದಿಂದಲೇ ಭಕ್ತರು ಸರದಿ ಸಾಲಿನಲ್ಲಿ ಶಿವ ದರ್ಶನ ಪಡೆಯುತ್ತಿದ್ದಾರೆ. ನಗರದ ಶಿವನ ದೇವಸ್ಥಾನ, ಶ್ರೀ ವಿಶ್ವನಾಥ ದೇವಸ್ಥಾನ, ಶ್ರೀ ಸಿದ್ಧಾರೂಢ ಮಠ ಸೇರಿದಂತೆ ವಿವಿಧ ಕಡೆ ಮಹಾಶಿವರಾತ್ರಿ ಆಚರಣೆ ನಡೆದವು. ಭಕ್ತರಿಂದ ಹಾಲು ಮತ್ತು ಬಿಲ್ವಪತ್ರೆ ಯಿಂದ ಶಿವಲಿಂಗಕ್ಕೆ ಪೊಜೆ ನೆರವೆರಿಸಲಾಗುತ್ತಿದೆ.. ರಾತ್ರಿ ಇಡೀ ಶಿವನ ದೇವಾಲಯಗಳಲ್ಲಿ ಜಾಗರಣೆ ವಿವಿಧ ಪೂಜಾ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ.
ಬೆಳಗಾವಿ : ಕುಂದಾನಗರಿಯಲ್ಲಿ ಮಹಾ ಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು ಸುಪ್ರಸಿದ್ಧ ದಕ್ಷಿಣಕಾಶಿ ಎಂದು ಖ್ಯಾತಿ ಪಡೆದ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರೆವೆರಿದವು. ಬೆಳಗ್ಗೆಯಿಂದಲೇ ರುದ್ರಾಭಿಷೇಕ, ವಿಶೇಷ ಧಾರ್ಮಿಕ ಪೂಜೆಗಳು ನೇರವೆರಿದವು. ಬೆಳಿನ ಜಾವದಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತುಕೊಂಡು ಕಪಿಲೇಶ್ವರ ದರ್ಶನ ಪಡೆಯುತ್ತಿದ್ದಾರೆ. ಮಧ್ಯರಾತ್ರಿ 12 ಗಂಟೆಯಿಂದಲೇ ವಿಶೇಷ ಪೂಜೆ ನೇರವೆರಿದವು. ಇಂದು ನಿರಂತರವಾಗಿ ಮಹಾರುದ್ರಾಭಿಷೇಕ, ಹರ ಮತ್ತು ಹರಿ ಮುಖಾಮುಖಿ ಇರೋ ಏಕೈಕ ದೇವಸ್ಥಾನ ಪ್ರಯಾಗರಾಜ್ ಕುಂಭಮೇಳದಿಂದ ಭಕ್ತರು ತಂದಿರೋ ಗಂಗಾಜಲದಿಂದ ಶಿವಲಿಂಗ ಮೂರ್ತಿ ಅಭಿಷೇಕ ಮಾಡಲಾಗಿದೆ.
