ಸುದ್ದಿಗೆ ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ ಮಾಡಿಸಿದ ಗ್ರಾಮ ಸಹಾಯಕ ರವಿ ಸಹಚರ
1 min read
ಆನೇಕಲ್ : ತಾಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ಇಂದು ಬೆಳಗ್ಗೆ ಸುದ್ದಿಗೆ ತೆರಳಿದ್ದ ಪತ್ರಕರ್ತನ ಮೇಲೆ ಗ್ರಾಮ ಸಹಾಯಕ ರವಿ ಮತ್ತು ಆತನ ಸಹಚರನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ನೆನ್ನೆ ಪತ್ರಕರ್ತ ಮುನಿಯಪ್ಪ ಸುದ್ದಿಗಾಗಿ ದೊಮ್ಮಸಂದ್ರದ ರಾಜಸ್ವ ನಿರೀಕ್ಷಕರ ಕಾರ್ಯಾಲಯ( ರೆವೆನ್ಯೂ ಇನ್ಸ್ಪೆಕ್ಟರ್) ಕಚೇರಿಗೆ ಹೋಗಿದ್ದ. ಕಾರ್ಯಾಲಯದಲ್ಲಿ ರವಿ ಸಮಯಕ್ಕೆ ಬಾರದಿರುವುದನ್ನ ಪ್ರಶ್ನೆ ಮಾಡಿದ್ದರಂತೆ,
ಬಳಿಕ ಇಂದು ಬೆಳಗ್ಗೆ ಮತ್ತೆ ಪರಿಶೀಲನೆಗಾಗಿ ಪತ್ರಕರ್ತ ಮುನಿಯಪ್ಪ ಹೋಗಿ ಕೇಳುವುದಕ್ಕೂ ಮುನ್ನ ಗ್ರಾಮ ಸಹಾಯಕ ರವಿಯ ಸಹಚರ ಮುನಿಯಪ್ಪನ ಮೇಲೆ ಆವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ಅದಲ್ಲದೆ ಕೊಲೆ ಬೆದರಿಕೆ ಧಮ್ಕಿಹಾಕಿ ಬೆದರಿಸಿದ್ದಾರೆ. ಇನ್ನು ಈ ಬಗ್ಗೆ ಕಚೇರಿ ಎದುರು ಮುನಿಯಪ್ಪ ವಿಡಿಯೋ ಚಿತ್ರೀಕರಣದ ವೇಳೆ ಕೂಡ ಮೊಬೈಲ್ ಕಸಿದು ದೌರ್ಜನ್ಯ ಎಸಗಿದ್ದಾರೆ. ಮುನಿಯಪ್ಪನ ಟಿವಿಎಸ್ ಮೊಪೆಡ್ ನ್ನೂ ಕಸಿದು ಪರಾರಿಯಾಗಿದ್ದಾನೆ.
ಅಲ್ಲದೆ ನಿನ್ನನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಇನ್ನು ಹಲ್ಲೆಗೊಳಗಾದ ಪತ್ರಕರ್ತ ಮುನಿಯಪ್ಪ ಸರ್ಜಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲು ಮಾಡಿದ್ದಾರೆ..ಇನ್ನು ಪತ್ರಕರ್ತ ಮುನಿಯಪ್ಪ ಕೈ ಮತ್ತು ಕಿವಿಗೆ ಗಾಯ ವಾಗಿದ್ದು ಚಿಕಿತ್ಸೆ ನೀಡಲಾಗಿದೆ..
