ಆನೇಕಲ್ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ತಿಲಕ್ ಅಧ್ಯಕ್ಷರಾಗಿ, ಎಂ ರಾಜಪ್ಪ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಆನೇಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅದ್ಯಕ್ಷರಾಗಿ ತಿಲಕ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಎಂ ರಾಜಪ್ಪ ಅವಿರೋಧವಾಗಿ ಆಯ್ಕೆಯಾದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲ ೧೨ ಸದಸ್ಯರೂ ಬಿಜೆಪಿ ಪಾಳೆಯ ಗೆದ್ದಿದ್ದು ಇಂದು ತಡವಾಗಿ ನಾಮಪತ್ರ ಸಲ್ಲಿಸಿದ ಪರಿಣಾಮ ಇಬ್ಬರನ್ನೂ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಇದ್ದ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.
ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜು ಗೌಡ, ಪುರಸಭಾ ಸದಸ್ಯ ಬಿ ನಾಗರಾಜು, ದಿನ್ನೂರು ರಾಜು, ದೊಡ್ಡ ಹಾಗಡೆ ಶಂಕರ್, ಕಾವಲಹೊಸಹಳ್ಳಿ ಪ್ರಶಾಂತ್, ವೆಂಕಟೇಶ್, ತಿಮ್ಮರಾಜು, ಮುತ್ತೂರು ನಾರಾಯಣಪ್ಪ, ಶುಭಾನಂದ ಮತ್ತಿತರರು ಇದ್ದರು.
![]()