ಹಿಂದೂ ಮುಸ್ಲೀಂ ಭಾವೈಕ್ಯತೆಯ ಉರುಸ್
1 min read
ಕೊಪ್ಪಳ : ಸರ್ವಧರ್ಮೀಯರ ಶ್ರದ್ಧಾ ಕೇಂದ್ರ ಭಾವೈಕ್ಯದ ತಾಣವಾಗಿರುವ ಕೊಪ್ಪಳದ ಹಜರತ್ ಮರ್ದಾನ್ ಎ ಗೈಬ್ ಉರುಸ್ ಭಾವೈಕ್ಯತೆಯಿಂದ ನಡೆಯಲಿದೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಕವಾಲಿ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಶ್ರದ್ಧಾ ಕೇಂದ್ರವಾಗಿರುವ ಹಜರತ್ ಮರ್ದಾನೆ ಗೈ ಬ್ ಇವರ ಪುರಸ್ ಕಾರ್ಯಕ್ರಮಕ್ಕೆ ಕೇವಲ ಕರ್ನಾಟಕದಿಂದ ಅಷ್ಟೇ ಅಲ್ಲದೆ ಆಂಧ್ರ ತೆಲಂಗಾಣ ಸೇರಿದಂತೆ ಅನ್ಯ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ ಆಗಮಿಸುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿದೆ ರಕ್ತದಾನ ಶಿಬಿರವನ್ನೂ ನಡೆಸಲಾಯಿತು, ಐವತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಉರುಸ್ ನಲ್ಲಿ ಭಾಗಿಯಾಗಿದ್ದರು…
