ಕಾಶಿ ಬಳಿ ಲಾರಿ ಮತ್ತು ಕ್ರೊಸರ್ ನಡುವೆ ಭೀಕರ ರಸ್ತೆ ಅಪಘಾತ… ಕಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಐದು ಜನ ಸ್ಥಳದಲ್ಲೇ ಸಾವು..!
1 min read
ಬೀದರ್ : ಕಾಶಿ ಬಳಿ ಲಾರಿ ಮತ್ತು ಕ್ರೊಸರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಐದು ಜನ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಉಳಿದವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಎರಿಕೆಗೆ ಸಾದ್ಯತೆಯಿದೆಎ. ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳು ಸಾವನಪ್ಪಿದ್ದಾರೆ. ಒಂದೇ ಕುಟುಂಬದ ಐದು ಜನ ಸ್ಥಳದಲ್ಲೇ ಸಾವನಪ್ಪಿದ್ಧಾರೆ. ಕಾಶಿಯಿಂದ 20 ಕಿಲೋ ಮೀಟರ ದೂರದ ಲಾರಗೆ ಹಿಂಬದಿಯಿಂದ ರಭಸವಾಗಿ ಡಿಕ್ಕಿಯಾದ ಕ್ರೂಸರ್… ಉತ್ತರ ಪ್ರದೇಶ್ ರಾಷ್ಟ್ರೀಯ ಹೆದ್ದಾರಿ ಮಿರಾಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ಘಟನೆ ಸಂಭವಿಸಿದೆ. ಸುನೀತಾ ( ೩೫ ) ಸಂತೋಷ ( ೪೩ ) ನೀಲಮ್ಮ (೬೦ ) ಸೇರಿದಂತೆ ಆರು ಜನ ಸಾವನಪ್ಪಿದ್ದಾರೆ.
ಪ್ರಯಾಗ್ ರಾಜ್ ನಿಂದ ಕಾಶಿ ಕಡೆ ಹೋಗುವಾ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ದಿನಗಳ ಹಿಂದೇ ಒಂದೇ ಗಾಡಿಯಲ್ಲಿ ಕುಂಭ ಮೇಳಕ್ಕೆ ತೆರಳಿದ್ದ ಕುಟುಂಬ… ಸಂಬಂಧಿಕರು ಸೇರಿದಂತ್ತೆ ಒಂದೇ ಕುಟುಂಬದ 12 ಜನ್ರು ಪ್ರಯೋಗ್ ರಾಜ್ ಗೆ ಪ್ರಯಾಣಿಸಿದರು. ಐದು ಜನ ಸಾವು, ಉಳಿದವರ ಸ್ಥಿತಿ ಗಂಭೀರವಾಗಿದೆ. ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
