[t4b-ticker]

ಮುಸ್ಲಿಂ ಅಂಗಡಿ ತೆರವಿಗೆ ಸವಿತಾ ಸಮಾಜದಿಂದ ಮುಷ್ಕರ

1 min read
Share it

 

ಕೊರಟಗೆರೆ:- ಹೊರರಾಜ್ಯದಿಂದ ತೋವಿನಕೆರೆಗೆ ಆಗಮಿಸಿ ಅನಧಿಕೃತವಾಗಿ ಪ್ರಾರಂಭ ಮಾಡಿರುವ ಸೇಲ್ಯೂನ್ ಅಂಗಡಿಯನ್ನು ಮುಚ್ಚಿಸುವಂತೆ ಆಗ್ರಹಿಸಿ ಸವಿತಾ ಸಮಾಜದಿಂದ ತಮ್ಮ ೧೨ಅಂಗಡಿ ಮಳಿಗೆಗಳನ್ನು ಸ್ವಯಂ ಪ್ರೇರಿತವಾಗಿ ಕಳೆದ ೩ದಿನದಿಂದ ಮುಚ್ಚಿ ಮುಷ್ಕರಕ್ಕೆ ಕರೆ ನೀಡಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ತಾಲೂಕು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮದಲ್ಲಿ ಹೊರರಾಜ್ಯದಿಂದ ಬಂದಿರುವ ಮುಸ್ಲಿಂ ಕುಟುಂಬವೊAದು ಕ್ಷೌರದ ಅಂಗಡಿ ತೆರೆದಿದ್ದಾರೇ. ಇದರಿಂದ ಭಜಂತ್ರಿ ಸಮುದಾಯದ ಕುಟುಂಬಗಳಿಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂದು ಆರೋಪಿಸಿ ೩ದಿನದಿಂದ ಸವಿತಾ ಸಮಾಜದ ಅಂಗಡಿ ಮಾಲೀಕರಿಂದ ಮುಷ್ಕರಕ್ಕೆ ಕರೆ ನೀಡಿ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

 

ಸವಿತಾ ಸಮಾಜದ ಆಗ್ರಹ ಏಕೆ ಗೊತ್ತಾ..
ಗ್ರಾಪಂಯಿಂದ ಪರವಾನಗಿ ಪಡೆಯದೇ ಅನಧಿಕೃತವಾಗಿ ಮುಸ್ಲಿಂ ಕುಟುಂಬ ಸೆಲ್ಯೂನ್ ತೆಗೆದಿದ್ದಾರೇ. ಮುಸ್ಲಿಂ ಅಂಗಡಿ ಮಾಲೀಕ ಗ್ರಾಹಕರಿಂದ ಕಡಿಮೆ ಹಣ ಪಡೆದು ಕಟಿಂಗ್ ಶೇವಿಂಗ್ ಮಾಡ್ತಾನೇ. ವಾರದಲ್ಲಿ ೧ದಿನವು ರಜೆಯಲ್ಲದೇ ಪ್ರತಿನಿತ್ಯ ಅಂಗಡಿ ತೆರೆಯುತ್ತಾರೆ. ನಾವು ಪೂರ್ವ ಕಾಲದಿಂದಲೂ ಇದೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೇ ಇವರಿಂದ ಪ್ರತಿನಿತ್ಯವು ನಷ್ಟವಾಗುತ್ತಿದೆ. ಆದ್ದರಿಂದ ಇವರ ಅಂಗಡಿ ಖಾಲಿ ಮಾಡಿಸಿ ನಮಗೇ ಅನುಕೂಲ ಕಲ್ಪಿಸಬೇಕು ಎಂಬುದು ಕೊರಟಗೆರೆ ಸವಿತಾ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

 

ಅಂಗಡಿ ಮುಚ್ಚಿಸಿದ ಮುಖಂಡರು..
ತೋವಿನಕೆರೆಯ ಮುಸ್ಲಿಂ ಕುಟುಂಬದ ಅಂಗಡಿಯನ್ನು ಅನಧಿಕೃತವಾಗಿ ಮಾಡುತ್ತಿದ್ದಿರಾ ಎಂದು ಆರೋಪಿಸಿ ಸವಿತಾ ಸಮಾಜದ ಮುಖಂಡರು ಖುದ್ದಾಗಿ ತೆರಳಿ ನಾವು ನಮ್ಮ ಅಂಗಡಿಗಳನ್ನು ಮುಚ್ಚಿದ್ದೇವೆ. ನೀವು ನಿಮ್ಮ ಅಂಗಡಿ ಮಳಿಗೆಯನ್ನು ಮುಚ್ಚಿ. ಗ್ರಾಪಂ ಪರವಾನಗಿ ಇಲ್ಲದೇ ಅಂಗಡಿ ಮಳಿಗೆ ತೆರೆಯಬಾರದು ಎಂದು ಮುಚ್ಚಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

ಮುಸ್ಲಿಂ ಕುಟುಂಬದ ಅಳಲು..
ನಾವು ಕಳೆದ ೧೫ವರ್ಷದಿಂದ ಕೊರಟಗೆರೆ ಪಟ್ಟಣದಲ್ಲಿ ವಾಸವಿದ್ದೇವೆ. ನಮ್ಮದು ಸ್ವಂತ ಮನೆ ಮತ್ತು ಅಂಗಡಿಗಳಿವೆ. ಪಪಂ ಮತ್ತು ಗ್ರಾಪಂಯಿAದ ನಮಗೇ ಆಧಾರ್, ಐಡಿ ಮತ್ತು ರೇಷನ್ ಕಾರ್ಡ್ ನೀಡಿದ್ದಾರೇ. ನಮಗೇ ಗೊತ್ತಿರೋದು ಸೇಲ್ಯೂನ್ ಕೆಲಸ ಬಿಟ್ಟರೇ ಬೇರೆನೂ ನಮಗೇ ಗೊತ್ತಿಲ್ಲ. ದುಡಿದು ತಿನ್ನುವ ಕೈಗಳಿಗೆ ಸುಮ್ಮನೇ ತೊಂದರೇ ನಮ್ಮ ಜೀವನ ನಡೆಯೋದು ಹೇಗೆ. ಗ್ರಾಮೀಣ ಭಾಗದ ಬಡಗ್ರಾಹಕರಿಂದ ೧೦ರೂ ಕಡಿಮೆ ಪಡೆದುಕೊಂಡರೇ ತಪ್ಪೇನು ಹೇಳಿ ಎಂದು ತಮ್ಮ ಅಲಳನ್ನು ತೋಡಿಕೊಂಡರು.
ಬೈಟ್೨:- ವರುಣ್. ಮುಸ್ಲಿಂ ಯುವಕ.

 

ತೋವಿನಕೆರೆ ಗ್ರಾಪಂ ಪಿಡಿಓ ಸ್ಪಷ್ಟನೆ..
ಕೊರಟಗೆರೆಯ ಸವಿತಾ ಸಮಾಜ ಸಂಘದಿAದ ಗ್ರಾಪಂಗೆ ಮನವಿ ಸಲ್ಲಿಸಿದ್ದಾರೇ. ಸವಿತಾ ಸಮಾಜದ ಮುಖಂಡರ ಮನವಿಯನ್ನು ಪರಿಶೀಲನೆ ನಡೆಸುತ್ತೇವೆ. ಅನಧಿಕೃತವಾಗಿ ಅಂಗಡಿ ಪ್ರಾರಂಭ ಮಾಡಿದ್ದರೇ ನೊಟೀಸ್ ಜಾರಿಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಗ್ರಾಪಂ ಅಂಗಡಿ ಪ್ರಾರಂಭಕ್ಕೆ ಪರವಾನಗಿ ಪಡೆಯೋದು ಕಡ್ಡಾಯ ಎಂದು ತೋವಿನಕೆರೆ ಗ್ರಾಪಂ ಪಿಡಿಓ ಲಕ್ಷಿö್ಮÃನಾರಾಯಣ್ ಸ್ಪಷ್ಟನೆ ನೀಡಿದರು.

ತೋವಿನಕೆರೆಯಲ್ಲಿ ಸವಿತಾ ಸಮಾಜದ ೧೨ಅಂಗಡಿಗಳಿವೆ. ಮುಸ್ಲಿಂ ಕುಟುಂಬ ಕಳೆದ ೪ವರ್ಷದ ಹಿಂದೆ ಒಂದೇ ಒಂದು ಸೇಲ್ಯೂನ್ ಅಂಗಡಿ ತೆರೆದು ಜೀವನ ಸಾಗಿಸುತ್ತಿದ್ದಾರೇ. ಪ್ರತಿಯೊಬ್ಬರು ಕೆಲಸ ಮಾಡುವುದು ಹೊಟ್ಟೆಪಾಡಿಗಾಗಿಯೇ ಎಲ್ಲರೂ ಒಟ್ಟಾಗಿ ಇಂತಿಷ್ಟು ಹಣ ಎಂದು ನಿಗಧಿ ಮಾಡಿ ನಾಮಫಲಕ ಅಳವಡಿಸಿ ಆದೇಶ ಮಾಡಿ ಎಲ್ಲರೀಗೂ ದುಡಿಮೆಗೆ ಅನುಕೂಲ ಕಲ್ಪಿಸಬೇಕಾದ ಜವಾಬ್ದಾರಿಯನ್ನು ಅಧಿಕಾರಿವರ್ಗ ತೆಗೆದುಕೊಳ್ಳಬೇಕಿದೆ.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?