ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮರಾಠಿ ಯುವಕರ ಗೂಂಡಾಗಿರಿ!?
1 min read
ಬೆಳಗಾವಿ : ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಮರಾಠಿ ಯುವಕರು ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸುಳೇಬಾವಿ ಬಾಳೇಕುಂದ್ರಿ ಗ್ರಾಮದ ಮಧ್ಯೆ ನಡೆದಿದೆ. ಬಸ್ ನಲ್ಲಿದ್ದ ಯುವತಿ ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಮರಾಠಿಯಲ್ಲಿ ಹೇಳಿದ್ದಾಳೆ,ಯುವತಿಯೊಂದಿಗ್ಗೆ ಯುವಕನೊಬ್ಬ ಪ್ರಯಾಣ ಮಾಡುತ್ತಿದ್ದರಿಂದ ಎರಡು ಟಿಕೆಟ್ ಕೇಳಿದ್ದಾಳೆ. ಮರಾಠಿ ಬರುವುದಿಲ್ಲ ನನಗೆ ಕನ್ನಡದಲ್ಲಿ ಹೇಳುವಂತೆ ಕಂಡಕ್ಟರ್ ಹೇಳಿದ್ದಾನೆ. ಇಷ್ಟಕ್ಕೆ ಜನರನ್ನ ಕರೆಸಿ ಚಲಿಸುತ್ತಿರುವ ಬಸ್ ನಿಲ್ಲಿಸಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಕಂಡಕ್ಟರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ಸದ್ಯ ಎಂಎಲಸಿ ಮಾಡಿಸಲು ಬೀಮ್ಸ್ ಆಸ್ಪತ್ರೆಗೆ ಕಳುಹಿಸಿದಾರೆ. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
