ಈ ವರ್ಷದ ಮೊದಲ ಮಳೆಗೆ ಸಾಕ್ಷಿಯಾದ ಕೊಡಗು
1 min read
ಕೊಡಗು: ಕೊಡಗು ಜಿಲ್ಲೆಯಲ್ಲಿ ಗುರುವಾರ ಸಂಜೆ ಮಳೆಯಾಗಿದೆ ಮಡಿಕೇರಿ ತಾಲ್ಲೂಕಿನ ಕುಂಜಿಲ, ಕಕ್ಕಬ್ಬೆ, ಯವಕಪಾಡಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಧಾರಕಾರ ಮಳೆಯಾಗಿದ್ದು, ನಾಪೋಕ್ಕು ವ್ಯಾಪ್ತಿಯಲ್ಲಿ ತುಂತುರು ಮಳೆಯಾಗುವ ಮೂಲಕ ಭೂಮಿ ತಂಪೆರೆದಿದೆ. 33 ಡಿಗ್ರಿಯಷ್ಟು ತಾಪಮಾನ ದಾಖಲಾಗಿದ್ದ ಕೊಡಗು ಜಿಲ್ಲೆಯಲ್ಲಿ ಮಳೆಯ ಆಗಮನದಿಂದ ಜಿಲ್ಲೆಯ ಜನತೆ ನಿರಾಳರಾಗಿದ್ದಾರೆ. ಕಕ್ಕಬ್ಬೆ ವ್ಯಾಪ್ತಿಯಲ್ಲಿ ಗುರುವಾರ 1.5 ಇಂಚು ಮಳೆ ಪ್ರಮಾಣ ದಾಖಲಾಗಿದೆ. ಸುಡುಬಿಸಿಲಿಗೆ ಒಣ ಹಾಕಿದ್ದ ಕಾಫಿಗೆ ಮಳೆ ತೀವ್ರ ಪರಿಣಾಮ ಬೀರಲಿದ್ದು, ಕಾಫಿ ಬೆಳೆಗಾರರಲ್ಲಿ ಆತಂಕ ಮೂಡಿದೆ….
