[t4b-ticker]

ಗ್ಯಾರಂಟಿ ಯೋಜನೆ ಜನರಿಗೆ, ತಾಯಂದಿರಿಗೆ ಕಣ್ಣಲ್ಲಿ ಮಣ್ಣುಹಾಕುವ ಯೋಜನೆ-ಸಂಸದ ಬಸವರಾಜ್ ಬೊಮ್ಮಾಯಿ

1 min read
Share it

ಗದಗ : ಗ್ಯಾರಂಟಿ’ ರಾಜಕೀಯ ಲಾಭಕ್ಕಾಗಿ, ಮತಕ್ಕಾಗಿ ಮಾಡಿದ ಯೋಜನೆ, ಜನರಿಗೆ, ತಾಯಂದಿರಿಗೆ ಕಣ್ಣಲ್ಲಿ ಮಣ್ಣುಹಾಕುವ ಯೋಜನೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು. ಗದಗದಲ್ಲಿ ಮಾತನಾಡಿದ ಅವರು ಗೃಹ ಲಕ್ಷ್ಮೀ ಹಣ ಸರಿಯಾಗಿ ಯಾವ ತಿಂಗಳೂ ಬಂದಿಲ್ಲ, ಗೃಹ ಲಕ್ಷ್ಮೀ ಯೋಜನೆ ಹಣ ಸಂಬಳವೆ ಅಂತಾ ಕೇಳ್ತಾರೆ. ಅದು ಗೌರವ ಧನ.. ತಿಂಗಳು ತಿಂಗಳಿಗೆ ಕೊಟ್ಟಿಲ್ಲ ಅಂದ್ರೆ ಗೌರವ ಕೊಟ್ಟಿಲ್ಲ,  ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ‌.  ಹಣಕಾಸಿನ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಸಿಎಂ ಭಂಡತನದಿಂದ ಒಪ್ಪಿಕೊಳ್ತಿಲ್ಲ. ಕೇವಲ ಗ್ಯಾರಂಟಿಗೆ ಅಷ್ಟೆ ಅಲ್ಲ ಯಾವುದೇ ಅಭಿವೃದ್ಧಿಗೂ ಹಣ ಇಲ್ಲ, ಸಾಲದ ರೂಪದ ಯೋಜನೆಗಳನ್ನ ಬಿಟ್ಟರೆ ಯಾವುದು ಇಲ್ಲ ಎಂದು ಹೇಳಿದರು.

 

 

ಕುಡಿಯುವ ನೀರಿನ ಯೋಜನೆಗೆ ಹಣ ಕೊಡದೇ ಕುಂಠಿತವಾಗಿದೆ. ರಾಜ್ಯ ಸರ್ಕಾರ ಜನರನ್ನ ಸಂಕಷ್ಟಕ್ಕೆ ದೂಡುತ್ತಿದೆ. ಜನ ಸಾಮಾನ್ಯರು ಬಳಸುವ ಎಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ತೆರಿಗೆ ಪಡೆದು ಅದನ್ನೇ ಗ್ಯಾರಂಟಿ‌ ರೂಪದಲ್ಲಿ ಮರಳಿ ಕೊಡುಲು ಮುಂದಾಗಿದೆ. ಆದ್ರೆ ಅದರಲ್ಲೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇವರಿಗೆ ಅಭಿವೃದ್ಧಿ ಮಾಡಲು ಮನಸ್ಸಿಲ್ಲ ಹೀಗಾಗಿ ಹಿಜಾಬ್ ಕಾಂಗ್ರೆಸ್ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಉದಯ ನಗರ ಗಲಾಟೆ, ಆತಂಕರಿಗೆ ಗಲಭೆ, ಹಿಜಾಬ್ ವಿಷಯವಾಗಿ ಹೈಕೋರ್ಟ್ ಆದೇಶಕೊಟ್ಟಿದೆ. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ. 1980 ರ ಶಿಕ್ಷಣ ನೀತಿಯ ಪ್ರಕಾರ ಸಮವಸ್ತ್ರ ಒಪ್ಪಿಕೊಳ್ಳಲಾಗಿದೆ. ಹಿಜಾಬ್, ಮತ್ತೊಂದು ತರುವ ಯೋಚನೆ ಮಾಡಲಾಗ್ತಿದೆ. ಕೆಲ ಸಂಘಟನೆಗಳು ಹಿಜಾಬ್ ತರಲು ಮುಂದಾಗಿದ್ದು ಸರ್ಕಾರದ ಕುಮ್ಮಕ್ಕು ನೀಡ್ತಿದೆ. ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ತೀವ್ರಗೊಂಡಿದೆ. ವಿಶ್ವವಿದ್ಯಾಲಯ ಬಿಳಿ ಆನೆಗಳಾಗಿ ಪರಿವರ್ತನೆಗೊಂಡಿವೆ. ನೂರಾರು ಕೋಟಿ ಖರ್ಚು ಮಾಡ್ತಾರೆ, ಸರಿಯಾಗಿ ಪರೀಕ್ಷೆ ನಡೀತಿಲ್ಲ. ರಿಸರ್ಚ್ ಆಗ್ತಿಲ್ಲ, ಪೇಪರ್ ಪ್ರಸೆಂಟೇಷನ್ ಆಗ್ತಿಲ್ಲ, ಯಾವುದೇ ಕೆಲಸ ಆಗ್ತಿಲ್ಲ ಭ್ರಷ್ಟಾಚಾರದ ಕೂಪಗಳಾಗ್ತಿವೆ. ಅದನ್ನ ಸರಿ ಪಡೆದೋದು ಬಿಟ್ಟು ಹೊಸ ವಿಶ್ವವಿದ್ಯಾಲಯ ಬಂದ್ ಮಾಡುತ್ತಿದ್ದಾರೆ ಎಂದರು.

 

 

ಅತೀ ಕಡಿಮೆ ವೆಚ್ಚದಲ್ಲಿ ಲೋಕಲ್ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗ್ತಿತ್ತು. ವಿಶೇಷ ಎಸ್ ಸಿ ಎಸ್ ಟಿ, ಒಬಿಸಿ ಹೆಣ್ಣುಮಕ್ಕಳು ದೊಡ್ಡಮಟ್ಟದಲ್ಲಿ ವಿವಿಯಲ್ಲಿ‌ ನೋಂದಾಯಿತರು, ಇವರ ಭವಿಷ್ಯಕ್ಕೆ ದೊಡ್ಡಮಟ್ಟದ ಕೊಡಲಿ ಪೆಟ್ಟನ್ನ ಕೊಟ್ಟಿದ್ದಾರೆ. ಹೊಸ ವಿಶ್ವವಿದ್ಯಾಲಯ ಮುಚ್ಚಲು ಬಿಡಲ್ಲ, ಕಾನೂನು ಹೋರಾಟ ಮಾಡ್ತೇವೆ, ಯುಜಿಸಿ ಪಾಲಿಸಿ ವಿರೋಧಿಸುವ ಮೂಲಕ ಪ್ರಗತಿಪರ ವಿಚಾರಕ್ಕೆ ವಿರೋಧ ಎಣದು ಹೇಳಿದರು.

 

 

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?