ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕೊಳಕು ಮಂಡಲದ ಹಾವು ಪ್ರತ್ಯಕ್ಷ
1 min read
ಹಾಸನ : ನಗರದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕೊಳಕು ಮಂಡಲದ ಹಾವು ಪ್ರತ್ಯಕ್ಷವಾಗಿದ್ದು ಇದನ್ನು ಕಂಡ ಹಿರಿಯ ವಕೀಲರಾದ ಬಸವರಾಜ್ ಮತ್ತು ವಕೀಲೆ ಯೋಗಿತಾ ಬಿ.ರಾಜ್ ಅವರು ಹಾವನ್ನು ಹಿಡಿದು ಸುರಕ್ಷಿತವಾಗಿ ಹಾಸನದ ಹೊರವಲಯದ ಗೆಂಡೆಕಟ್ಟೆ ಅರಣ್ಯಕ್ಕೆ ಬಿಟ್ಟಿದ್ದಾರೆ.ಕೊಳಕು ಮಂಡಲ ಹಾವಿನಲ್ಲಿ ವಿಷದ ಪ್ರಮಾಣ ಹೆಚ್ಚಿದ್ದು ಅದು ಕಚ್ಚಿದ ಭಾಗ ನಿಧಾನವಾಗಿ ಕೊಳೆಯುತ್ತ ಬರುತ್ತದೆ,ಇಂದು ಕಂಡುಬಂದಿರುವ ಹಾವು ಸುಮಾರು ಮೂರುವರೆ ಅಡಿ ಉದ್ದ ಇದ್ದು ಇಷ್ಟು ಉದ್ದದ ಕೊಳಕು ಮಂಡಲ ಕಾಣಸಿಗುವುದು ಅಪರೂಪ. ಇದು ಬಹುಶಃ ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ವಿಶ್ರಾಂತಿಗಾಗಿ ಇಲ್ಲಿಗೆ ಬಂದಿರಬಹುದು ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ. ವೃತ್ತಿಯಲ್ಲಿ ವಕೀಲರಾದರು ಧೈರ್ಯವಾಗಿ ಹಾವಿನ ರಕ್ಷಣೆ ಮಾಡಿರುವ ವಕೀಲ ಬಸವರಾಜ್ ಮತ್ತು ವಕೀಲೆ ಯೋಗಿತಾ ಬಿ.ರಾಜ್ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
