ಕೇವಲ ನೂರು ರೂಪಾಯಿ ಕೊಟ್ಟಿಲ್ಲ ಅಂತಾ ಮನೆ ವರೆಗೂ ವಸೂಲಿಗೆ ಬಂದ ಫೈನಾನ್ಸ್ ಸಿಬ್ಬಂದಿ
1 min read
ಬೆಳಗಾವಿ: ಕೇವಲ ನೂರು ರೂಪಾಯಿ ಕೊಟ್ಟಿಲ್ಲ ಅಂತಾ ಮನೆ ವರೆಗೂ ವಸೂಲಿಗೆ ಫೈನಾನ್ಸ್ ಸಿಬ್ಬಂದಿ ಬಂದಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಘಟನೆ ನಡೆದಿದೆ. ಬಸವರಾಜ ಕಂತಿನ ಎಲ್ಲ ಹಣ ಕಟ್ಟಿ ಕೇವಲ ನೂರು ರೂಪಾಯಿ ಬಾಕಿ ಉಳಿಸಿಕೊಂಡಿದ್ದರು. 55 ಸಾವಿರ ಹಣ ಗ್ರಾಮೀಣ ಕೂಟ ಎಂಬ ಫೈನಾನ್ಸ್ ನಲ್ಲಿ ಸಾಲ ಪಡೆದಿದ್ದರು. ವಾರಕ್ಕೆ 650ರೂಪಾಯಿ ಕಟ್ಟುತ್ತಿದ್ದರು. ನಿನ್ನೆ 550 ರೂಪಾಯಿ ಸಾಲದ ಕಂತು ಕಟ್ಟಿ ನೂರು ರೂಪಾಯಿ ಬಾಕಿ ಉಳಿಸಿಕೊಂಡಿದ್ದರು. ನೂರು ರೂಪಾಯಿ ಹಣಕ್ಕಾಗಿ ಫೈನಾನ್ಸ್ ಸಿಬ್ಬಂದಿ ಮನೆ ವರೆಗೂ ಬಂದು ಗಲಾಟೆ ಮಾಡಿದರು . ಇದರಿಂದ ಆಕ್ರೋಶಗೊಂಡು ಫೈನಾನ್ಸ್ ಸಿಬ್ಬಂದಿ ತರಾಟೆತೆಗೆದುಕೊಂಡರು. ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡು ನೂರು ರೂಪಾಯಿ ಕೊಟ್ಟರು. ಫೈನಾನ್ಸ್ ಸಿಬ್ಬಂದಿ ದುರ್ವರ್ತನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
