ಕಾಂಗ್ರೆಸ್ ಸರ್ಕಾರ ಎಸ್‌ಸಿಪಿ ಹಾಗೂ ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದೆ- ಬಿ.ವೈ.ವಿಜಯೇಂದ್ರ
1 min read
ಬೆಂಗಳೂರು : ಕಾಂಗ್ರೆಸ್ ಸರ್ಕಾರ ಎಸ್‌ಸಿಪಿ ಹಾಗೂ ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಳೆದ ಬಜೆಟ್‌ಗಳಲ್ಲೂ 14-15 ಸಾವಿರ ಕೋಟಿ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು ಇಂದು ವಿಶೇಷ ಸಭೆ ಹಾಗೂ ಕಾರ್ಯಾಗಾರ ಆಯೋಜನೆ ಮಾಡಿದ್ದೇವು. ಪರಿಶಿಷ್ಟ ಜಾತಿ, ಪಂಗಡದ ಸಮುದಾಯಕ್ಕೆ ಮೀಸಲಿಟ್ಟ ಹಣ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ಗ್ಯಾರೆಂಟಿಗಳಿಗೆ ಅದನ್ನು ಬಳಕೆ ಮಾಡಿಕೊಳ್ಳುತ್ತಾರೆ. ಮುಂದಿನ 7 ನೇ ತಾರೀಖಿನಂದು ಬಜೆಟ್ ಮಂಡನೆ ಸಂದರ್ಭದಲ್ಲಿ ಅನುದಾನ ವರ್ಗಾವಣೆ ಮಾಡುತ್ತಾರೆ. ಅಂದು ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಈ ಹಣ ಇಡಬೇಕು ಎಂಬುದು ನಮ್ಮ ಆಗ್ರಹ ಎಂದು ಹೇಳಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯರಿಗೆ ಕ್ಲೀನ್‌ಚಿಟ್ ವಿಚಾರವಾಗಿ ಮಾತನಾಡಿದ ಅವರು ಎಲ್ಲಾ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ. ಇದು ನಮಗೆ ಆಶ್ಚರ್ಯ ತಂದಿಲ್ಲ. ರಾತ್ರಿ 8-9 ಘಂಟೆಗೆ ಮಾವನ ಮನೆಗೆ ಹೋಗುವ ಹಾಗೇ ಸಿಎಂ ಹೋಗಿ ಬಂದಿದ್ರು. ಅವರ ಕಡೆಯವರು ಹೋಗಿ ಬಂದಿದ್ರು. ಇದರಲ್ಲಿ ನಮಗೆ ಆಶ್ಚರ್ಯ ಏನೂ ಇಲ್ಲ. ಮುಡಾದಲ್ಲಿ ಆಕ್ರಮದಲ್ಲಿ ಆಗಿಲ್ಲ ಎಂದಿದ್ರು ಮುಡಾ ಹಗರಣದಲ್ಲಿ ನಡೆದಿದೆ ಎಂದು ನಾವು ಜೆಡಿಎಸ್ ಮೈಸೂರಿಗೆ ಪಾದಯಾತ್ರೆ ಮಾಡಿದ್ದೇವು. ನೀವು ತಪ್ಪು ಮಾಡಿಲ್ಲ ಅಂದರೆ ನಿವೇಶನ ವಾಪಸ್ ಕೊಟ್ಟಿದ್ದೇಕೆ? ಸಿಎಂ ಸಿದ್ಧರಾಮಯ್ಯರಿಗೆ ಪ್ರಶ್ನೆ ಮಾಡಿದ ವಿಜಯೇಂದ್ರ ಇದೊಂದು ಫೇಕ್ ಕ್ಲೀನ್‌ಚಿಟ್. ಸಿಎಂ ಸಿದ್ಧರಾಮಯ್ಯರನ್ನು ಮಾಧ್ಯಮದವರು ಕೇಳಬೇಕು ಎಂದರು.
ಮುಡಾ ಹಗರಣದಲ್ಲಿ ಲೋಕಾಯುಕ್ತರಿಂದ ಸಿಎಂ ಸಿದ್ಧರಾಮಯ್ಯರಿಗೆ ಕ್ಲೀನ್‌ಚಿಟ್ ವಿಚಾರ ಸಿಎಂ ಸಿದ್ಧರಾಮಯ್ಯ ಆಯ್ಕೆ ಮಾಡಿರುವ ಅಧಿಕಾರಿಗಳು ಅವರು. ಅಂದ್ಮೇಲೆ ಏನು ನಿರೀಕ್ಷೆ ಮಾಡಲು ಸಾಧ್ಯ? ತಪ್ಪು ಮಾಡಿಲ್ಲ ಅಂದ ಮೇಲೆ ನಿವೇಶನ ವಾಪಸ್ ಮಾಡಿದ್ದೇಕೆ? ನಇದರ ಬಗ್ಗೆ ಮುಂದಿನ ದಿನಗಳಲ್ಲಿ ಬಿಜೆಪಿ ಹೋರಾಟದ ಹಾದಿ ರೂಪಿಸಲಿದೆ ಎಂದ ವಿಜಯೇಂದ್ರ ಹೇಳಿದರು.
