[t4b-ticker]

ಸರವಿ,ಲಕ್ಷ್ಮೀ ಹೆಬ್ಬಾಳಕರ್ ಜಟಾಪಟಿ ಪ್ರಕರಣ ಬಗೆಹರಿಸುವ ಜವಾಬ್ದಾರಿ ನನ್ನ ಮೇಲಿದ್ದು, ಶೀಘ್ರದಲ್ಲೇ ಬಗೆಹರಿಯಲಿದೆ-ಬಸವರಾಜ್ ಹೊರಟ್ಟಿ

1 min read
Share it

ಹುಬ್ಬಳ್ಳಿ:  ಸಿಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಜಟಾಪಟಿ ಕೇಸ್ ಪ್ರಕರಣವನ್ನು ಪರಿಷತ್ ನ ವಿಷಯ ನೀತಿ ನಿರೂಪಣಾ ಕಮೀಟಿಗೆ ಕಳಿಸಲಾಗಿದೆ. ಇನ್ನು ಅಲ್ಲಿಂದ ಯಾವುದೇ ರಿಪೋರ್ಟ್ ಮಾಹಿತಿ ಬಂದಿಲ್ಲ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಕಮಿಟಿಯಲ್ಲಿ ಎಲ್ಲಾ ಪಕ್ಷಗಳ 8 ಸದಸ್ಯರನ್ನು ಒಳಗೊಂಡ ಸಮಿತಿಯಲ್ಲಿ ಇರುತ್ತಾರೆ. ಕಮಿಟಿ ಶೀಘ್ರದಲ್ಲೇ ಮೀಟಿಂಗ್ ಕರೆಯುವ ನಿರೀಕ್ಷೆ ಇದೆ. ಏನೆ ಆಗಲಿ ಪ್ರಕರಣವನ್ನು ಬಗೆಹರಿಸುವ ಜವಾಬ್ದಾರಿ ನನ್ನ ಮೇಲಿದ್ದು, ಶೀಘ್ರದಲ್ಲೇ ಬಗೆಹರಿಯುವ ನಿರೀಕ್ಷೆ ಇದೆ. ಮಾರ್ಚನಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರಕರಣವನ್ನು ಸುಖಾಂತ್ಯಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದರು.

 

ಪ್ರಕರಣದಲ್ಲಿ ಅತಿ ಹೆಚ್ಚು ಎಂದರೆ ಒಂದು ಅವಧಿಯ ಅಧಿವೇಶನದಿಂದ ಹೊರಹಾಕಬಹುದು. ಇತ್ತೀಚೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಎರಡು ಬಾರಿ ಕರೆ ಮಾಡಿದ್ದೇನು. ಆದರೆ, ಅವರು ಫೋನ್ ರಿಸೀವ್ ಮಾಡಿಲ್ಲ ಎಂದು ಕರೆ ಮಾಡಿದ್ದನ್ನು ಮಾಧ್ಯಮಗಳಿಗೆ ತೋರಿಸಿದರು. ಎಮೋಷನಲ್ ಇದ್ದಾಗ ಇಂಥ ಘಟನೆಗಳು ಅಗುವ ಸಾಧ್ಯತೆ ಇರುತ್ತದೆ. ಸದನದಲ್ಲಿ ಆಗಿದ್ದರೆ ನಾನು ಅದನ್ನು ಅಲ್ಲೆ ಬಗೆಹರಿಸುತ್ತಿದೆ.ಏನೇ ಇರಲಿ ಇದನ್ನು ಎಂಡ್ ಮಾಡಬೇಕು. ಯಾಕಂದ್ರೆ ಇತಿಹಾಸ ಹಾಗೆ ಉಳಿಯುತ್ತದೆ ಈ ಪ್ರಕರಣ ಒಳ್ಳೆ ರೀತಿಯಲ್ಲಿ ಮುಗಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?