c24kannada

ವಸ್ತುಸ್ಥಿತಿಯತ್ತ

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಜಾಮರ್ ಅಳವಡಿಕೆ ಸುತ್ತಮುತ್ತಲಿನ ಗ್ರಾಮದ ಜನರಿಗೆ ಫಜೀತಿ

Share it

 

ಬೆಳಗಾವಿ  : ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಜಾಮರ್ ಅಳವಡಿಕೆಯಿಂದಾಗಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಆರಂಭವಾಗಿದೆ, ಹಿಂಡಲಗಾ ಗ್ರಾಮ, ವಿಜಯನಗರ, ಗಣೇಶಪುರ, ಬೆನಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಜನ ವಸತಿ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿದೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ,
ಗ್ರಾಮ ಪಂಚಾಯತಿ, ಸರ್ಕಾರಿ ಕಚೇರಿಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಸರ್ವರ್ ಡೌನ್ ಆಗಿದೆ, ಜಾಮರ್ ಪ್ರೀಕ್ವೇನ್ಸಿ ಕಡಿಮೆ ಮಾಡಲು ಹಿಂಡಲಗಾ ಗ್ರಾಮ ಪಂಚಾಯತಿಯಿಂದ ಜೈಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು. ಜೈಲಿನ ಕೈದಿಗಳು‌‌ ಮೊಬೈಲ್ ಬಳಕೆಗೆ ಬ್ರೇಕ್ ಹಾಕಲು ಜಾಮರ್ ಅಳವಡಿಕೆ ಮಾಡಲಾಗಿದೆ ಎಂದಿದ್ದಾರೆ ಜೈಲಧಿಕಾರಿಗಳು, ಇದೇ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಹೋಗಿತ್ತು.

 

ಹಿಂಡಲಗಾ ಜೈಲಿನಲ್ಲಿ ದುಡ್ಡುಕೊಟ್ಟರೆ ಎಲ್ಲವೂ ಸಿಗುತ್ತೆ ಅನ್ನೋದನ್ನ ಕೈದಿಗಳೇ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಬೆಳಕಿಗೆ ತಂದಿದ್ದರು, ಕೈದಿಗಳು ಜೈಲಿನಲ್ಲಿ ಮೊಬೈಲ್ ಬಳಕೆ ಬ್ರೇಕ್ ಹಾಕಲು ಜೈಲಾಧಿಕಾರಿಗಳಿಂದ ಜಾಮರ್ ಅಳವಡಿಕೆ ಮಾಡಿದ್ದಾರೆ. ಕಳೆದ ನಾಲ್ಕೈದು ವರ್ಷದಿಂದ ಜೈಲಿನಲ್ಲಿದ್ದ 2 ಜಿ ಜಾಮರ್ ಕೆಟ್ಟು ಹೋಗಿತ್ತು, ಈಗ ಟೆಕ್ನಾಲಜಿ ಅಪ್ಡೇಟ್ ಮಾಡಿ 5 ಜಿ ಜಾಮರ್ ಅಳವಡಿಕೆ ಮಾಡಲಾಗಿದೆ. ಜಾಮರ್ ಅಳವಡಿಕೆಯಿಂದ ಸುತ್ತಮುತ್ತಲಿನ ಜನರಿಗೆ ತೊಂದರೆ ಆಗುತ್ತಿದ್ದು ಜಾಮರ್ ಫ್ರೀಕ್ವೆನ್ಸಿ ಕಡಿಮೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಜೈಲಾಧಿಕಾರಿಗಳಿಗೆ ಜನರಿಂದ ಎಚ್ಚರಿಕೆ

 

Loading

Leave a Reply

Your email address will not be published. Required fields are marked *

error: Content is protected !!