ಸಿಮೆಂಟ್ ಫ್ಯಾಕ್ಟರಿ ಅವಾಂತರಕ್ಕೆ ಬಲಿಯಾದ ಯುವಕ
1 min read
ಕಲಬುರಗಿ : ಕಲಬುರಗಿ ಜಿಲ್ಲೆಯ ಸೇಡಂನ ವಾಸವದತ್ತಾ ಫ್ಯಾಕ್ಟರಿ ಅವಾಂತರಕ್ಕೆ ಯವಕನೊಬ್ಬ ಬಲಿಯಾಗಿದ್ದಾನೆ, ಸಿಮೆಂಟ್ ಫ್ಯಾಕ್ಟರಿ ಗೂಡ್ಸ್ ರೈಲು ಸಂಚರಿಸ್ತಿದ್ದ ಹಿನ್ನಲೆಯಲ್ಲಿ ರಸ್ತೆ ಸಂಚಾರ 20 ನಿಮಿಷಕ್ಕೂ ಹೆಚ್ಚು ಕಾಲ ಸ್ಥಗಿತ ಗೊಳಿಸಲಾಗಿತ್ತು. ಫ್ಯಾಕ್ಟರಿ ಗೂಡ್ಸ್ ರೈಲು ಪಾಸ್ ಆಗುವವರೆಗೂ ರಸ್ತೆಯಲ್ಲಿ ನಿಂತಿದ್ದ ಆಂಬುಲೇನ್ಸ್ ಸೇಡಂ ನಿಂದ ಕಲಬುರಗಿಗೆ ಚಿಕಿತ್ಸೆಗಾಗಿ ತೇರಳ್ತಿದ್ದ ಯುವಕ ಸಾವು. ಸೇಡಂ ಪಟ್ಟಣದ ನಿವಾಸಿ ಮುಕ್ತಾರ ಎಂಬಾತನನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದ್ದಾನೆ.
ನಿನ್ನೆ ರಾತ್ರಿ ಕ್ರಿಕೇಟ್ ಆಡುವಾಗ ಫಿಡ್ಸ್ ಬಂದು ಬಳಿಕ ಹೃದಯಾಘಾತಕ್ಕೆ ಒಳಗಾಗಿದ್ದ ಮುಕ್ತಾರ್ ಎಂಬ ಯುವಕ, ಹೃದಯಾಘಾತಕ್ಕೆ ಒಳಗಾದ ಮುಕ್ತಾರನನ್ನ ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕೊಂಡೊಯ್ಯಲು ಸೂಚನೆ ಹಿನ್ನಲೆ ಸೇಡಂ ನಿಂದ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆತರುವಾಗ ಸಾವನಪ್ಪಿದ್ದಾನೆ. ಸೇಡಂ ಪಟ್ಟಣದಿಂದ ಆಂಬುಲೆನ್ಸ್ ಮೂಲಕ ಕಲಬುರಗಿಗೆ ಕರೆತರುವಾ ಗೂಡ್ಸ್ ವಾಹನ ಸಂಚರಿಸ್ತಿದ್ದ ಹಿನ್ನಲೆ ಆಂಬುಲೆನ್ಸ್ 30 ನಿಮಿಷ ನಿಂತಿದ್ರಿಂದ ಗೋಲ್ಡನ್ ಅವರ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗದೆ ಯುವಕ ಸಾವು. ಮುಕ್ತಾರ ಸಾವನ್ನಪ್ಪಿದ ಹಿನ್ನಲೆ ಫ್ಯಾಕ್ಟರಿ ಮುಂಭಾಗ ಆತನ ಸಂಭಂದಿಕರು ಪ್ರತಿಭಟನೆ ನಡೆಸಿದ್ರು, ವಾಸವದತ್ತಾ ಫ್ಯಾಕ್ಟರಿ ರೈಲು ಹಳಿ ಸ್ಥಾಳಂತರಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಇದೆ. ಹಳಿ ಸ್ಥಳಾಂತರ ಮಾಡಿ ಇಲ್ಲಾ ರೈಲು ಸಮಯ ಬದಲಾವಣೆ ಮಾಡುವಂತೆ ಅನೇಕ ಬಾರಿ ಹೋರಾಟ ಮಾಡಲಾಗಿತ್ತು. ಆದ್ರು ಕೂಡ ಸಮಯ ಬದಲಾವಣೆ , ಹಳಿ ಸ್ಥಳಾಂತರ ಆಗದ ಹಿನ್ನಲೆ ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ..
