ಹೊಲಕ್ಕೆ ನುಗ್ಗಿದ್ದ ಮೊಸಳೆಯನ್ನ ಜೆಸ್ಕಾಂ ಕಚೇರಿಗೆ ಜೀವಂತವಾಗಿ ಹಿಡಿದು ತಂದ ರೈತರು
1 min read
ಕಲಬುರಗಿ : ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬೂರ್ ಗ್ರಾಮದಲ್ಲಿ ಬೆಳಗಿನ ಜಾವ 4 ಗಂಟೆಗೆ ಪೂಜಾರಿ ಎಂಬಾತ ಗೋದಿಗೆ ನೀರು ಬಿಡಲು ಹೋದಾಗ ಮೊಸಳೆ ಪ್ರತ್ಯಕ್ಷವಾಗಿದೆ. ಕೂಡಲೇ ಎಲ್ಲಾ ರೈತರು ಸೇರಿ ಮೊಸಳೆಯನ್ನ ಕಟ್ಟಿಹಾಕಿ ಜೆಸ್ಕಾಂ ಕಚೇರಿ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದ್ದಾರೆ. ನಸುಕಿನ ಜಾವ ವಿದ್ಯುತ್ ಮಾಡಿದ್ರೆ ಕತ್ತಲಲ್ಲಿ ರೈತರ ಜೀವಕ್ಕೆ ಏನಾದ್ರು ಆದ್ರೆ ಹೊಣೆ ಯಾರು ಅಂತ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಆರು ಗಂಟೆಯವರೆಗೆ ವಿದ್ಯುತ್ ನೀಡುವಂತೆ ಆಗ್ರಹಿಸಿದ್ದಾರೆ..
