ಗ್ರಾಮ ಪಂಚಾಯಿತಿ – ಪುರಸಭೆಗಳನ್ನು ಮೇಲ್ದರ್ಜೆಗೇರಿಸುವುದು ಅವೈಜ್ಞಾನಿಕ. -ರಾಷ್ಟ್ರಪ್ರಶಸ್ತಿ ವಿಜೇತ ಡಾ ವೈ ಚಿನ್ನಪ್ಪ.
1 min read
ಗ್ರಾಮ ಪಂಚಾಯಿತಿ – ಪುರಸಭೆಗಳನ್ನು ಮೇಲ್ದರ್ಜೆಗೇರಿಸುವುದು ಅವೈಜ್ಞಾನಿಕ. -ರಾಷ್ಟ್ರಪ್ರಶಸ್ತಿ ವಿಜೇತ ಡಾ ವೈ ಚಿನ್ನಪ್ಪ
ಆನೇಕಲ್. ಫೆ. 19: ಇತ್ತೀಚೆಗೆ ಗ್ರಾಮಪಂಚಾಯಿತಿ ಪುರಸಭೆಗಳ ಮೇಲ್ದರ್ಜೆಗೇರಿಸುವ ಪ್ರಸ್ತಾವ ಆನೇಕಲ್ ತಾಲೂಕಿನ ಸರ್ಕಾರಿ ಕಚೇರಿ ವಲಯಗಳಲ್ಲಿ ಜೋರಾಗಿರುವುದನ್ನು ಗಮನಿಸಿದ ಚಿನ್ಮಯ ಸೇವಾ ಸಂಸ್ಥೆ ಸಂಸ್ಥಾಪಕ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ ವೈ ಚಿನ್ನಪ್ಪ ಈ ಪ್ರಸ್ತಾವ ಅವೈಜ್ಞಾನಿಕದಿಂದ ಕೂಡಿದೆ ಎಂದು ಪತ್ರಿಕಾಘೋಷ್ಟಿಯಲ್ಲಿ ಖಂಡಿಸಿದರು.
ಜನಸಂಖ್ಯೆಯ ಸ್ಪಷ್ಟ ಚಿತ್ರಣವೇ ಇಲ್ಲದೆ ಸ್ಥಳೀಯ ಸಂಸ್ಥೆಗಳ ಮೇಲ್ದರ್ಜೆಗೆ ಏರಿಸುವುದು ಎಷ್ಟು ಸರಿ, ಈಗಾಗಳೇ 2011 ರ ಜನಗಣತಿಯನ್ನೇ ಆಧಾರವಾಗಿಟ್ಟು ಜನಸಂಖ್ಯೆಯನ್ನು ಅಂದಾಜಿಸುವುದು ನಿಖರತೆ ಅಲ್ಲದಿರುವುದರಿಂದ ಜನರ ನಡುವೆಯೂ ಒಂದು ಚರ್ಚೆಯಿಲ್ಲದೆ ಏಕಾಏಕಿ ರಿಯಲ್ ಎಸ್ಟೇಟ್ ಕಾರ್ಪೊರೇಟರ್ಗಳಿಗೆ ಅನುಕೂಲ ಮಾಡಿಕೊಡುವ ಏಕೈಕ ಉದ್ದೇಶದಿಂದ ರಾಗಿ ನಾಡನ್ನ ಸಂಪೂರ್ಣ ವಾಣಿಜ್ಯ ಕಾಂಕ್ರಿಟ್ ಕಾಡಾಗಿಸಿ ಇಲ್ಲಿನ ರೈತರನ್ನ ಮೀಸಲು ಕ್ಷೇತ್ರದ ದಲಿತರನ್ನ ಬೀದಿಗೆ ತಳ್ಳುವುದು ಈಗಿನ ಜರೂರಾಗಿ ಜನಪ್ರತಿನಿಧಿಗಳಿಗೆ ಕಾಣುತ್ತಿರುವುದು ಶೋಚನೀಯ ಎಂದು ಚಿಕ್ಕಹಾಗಡೆ ಡಾ ವೈ ಚಿನ್ನಪ್ಪ ಬೇಸರ ವ್ಯಕ್ತಪಡಿಸಿದರು.
ಆನೇಕಲ್ ಹೋರಾಟಗಳ ಆಗರವಾಗಿದ್ದರೂ ಒಂದೇ ಒಂದು ಸಂಘಟನೆ ಇಂತಹ ವಿಚಾರಕ್ಕೆ ಕೈಜೋಡಿಸದಿರುವುದು ದುರಂತ ಎಂದು ಖೇದ ವ್ಯಕ್ತಪಡಿಸಿದರು.
ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಒಂದು ಹೆಬ್ಬಗೋಡಿ ನಗರಸಭೆಯಿದೆ, ಉಳಿದಂತೆ ಆನೇಕಲ್ ಅತ್ತಿಬೆಲೆ, ಬೊಮ್ಮಸಂದ್ರ, ಮತ್ತು ಚಂದಾಪುರ ಪುರಸಭೆಗಳಿವೆ. ಇನ್ನು ಜಿಗಣಿ ಬೆಂ ದಕ್ಷಿಣ ವಿಧಾನ ಸಭೆಗೆ ಸೇರಿದೆ. ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಗಣನೀಯ ಜನ ಸಂಖ್ಯೆಯೇನೂ ಏರದೆ, ಕೇವಲ ವಲಸೆ ಕಾರ್ಮಿಕರ ಅಂಕಿ ಸಂಖ್ಯೆಯನ್ನು ಆಧಾರಿಸಿ ಮೇಲ್ದರ್ಜೆಗೆ ಏರಿಸುವುದು ಸಮಂಜಸವಲ್ಲ ಎಂದರು.
ಚಿನ್ಮಯ ಸೇವಾ ಸಂಸ್ಥೆಯ ಸಂಸ್ಥಾಪಕ ಡಾ.ವೈ.ಚಿನ್ನಪ್ಪ ಚಿಕ್ಕಹಾಗಡೆ ಮಾತನಾಡಿ, ಆನೇಕಲ್ ತಾಲೂಕು ಇನ್ನೂ ಕೂಡ ಹಿಂದುಳಿದ ಕ್ಷೇತ್ರ ಆಗಿದೆ ಆದರೆ ಇದನ್ನು ಈಗ ಪಟ್ಟಣ ಪಂಚಾಯಿತಿ ನಗರಸಭೆ ಪುರಸಭೆ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರ ಸರಿಯಲ್ಲ,
ಗ್ರಾಮೀಣ ಭಾಗದ ರೈತರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ, ಅನೇಕ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಇದಕ್ಕೆ ವಿರೋಧ ಇದ್ದಾರೆ ಆದರೆ ನೇರವಾಗಿ ಹೊರಬರಲು ಸಾಧ್ಯ ಆಗದೆ ಪರದಾಡುವ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಹೇಳಿದರು.
ಮೀಸಲು ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ ಜನ ಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯವಾಗಿ ಹಣ ಬಿಡುಗಡೆ ಮಾಡಲು ಅಧಿಕಾರ ಇರುತ್ತದೆ ಆದರೆ ಪುರಸಭೆ ಹಾಗೂ ನಗರಸಭೆ ಆದರೆ ಪ್ರತಿಯೊಂದುಕ್ಕೂ ಜಿಲ್ಲಾಧಿಕಾರಿಗಳ ಬಳಿ ಹೋಗಬೇಕಾಗುತ್ತದೆ ಇದರಿಂದ ಅಭಿವೃದ್ಧಿ ಕುಂಠಿತ ಆಗಲಿದೆ ಎಂದು ಹೇಳಿದರು.
ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ನಗರಸಭೆ ಹಾಗೂ ಪುರಸಭೆ ಮಾಡಲು ಹೊರಟಿದೆ,ಇದರ ಸಾದಕ ಬಾದಕ ಚರ್ಚೆ ಆಗಬೇಕಿದೆ,ಬೆಂಗಳೂರು ನಗರ ಜಿಲ್ಲಾಧಿಕಾರಿ ಸೆಪ್ಟೆಂಬರ್ ನಲ್ಲಿ ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಆದೇಶ ಮಾಡಿದ್ದರು,ಪುರಸಭೆ ಹಾಗೂ ನಗರಸಭೆ ಮಾಡಲು ಜನಸಂಖ್ಯೆ ಇಷ್ಟು ಇರಬೇಕು ಎನ್ನುವುದು ಇದೆ ಆದರೆ ಇದ್ಯಾವುದನ್ನು ಪರಿಗಣಿಸದೇ 28 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣ ಬಾಗದ ಸೊಗಡು ಹೆಚ್ಚಾಗಿದೆ, ತೋಟಗಾರಿಕೆ ನಮ್ಮಲ್ಲಿ ಅತೀ ಹೆಚ್ಚಾಗಿದೆ,ರಾಗಿಯ ಕಣಜ ಎನ್ನುವ ಹೆಸರು ಹಾಗೆ ಉಳಿಯಬೇಕಿದೆ, ಹಲವಾರು ಕಡೆ ರೈತರು ವ್ಯವಸಾಯವನ್ನೇ ನಂಬಿದ್ದಾರೆ,ಗ್ರೇಟರ್ ಬೆಂಗಳೂರು ಮಾಡುವುದರಿಂದ ಆನೇಕಲ್ ತಾಲ್ಲೂಕಿನ ರೈತರು ಡೋಲಾಯಮಾನ ಆಗಲಿದ್ದಾರೆ, ನೆರಳೂರು ಬಿದರಗುಪ್ಪೆ,ಅತ್ತಿಬೆಲೆ ಸೇರಿ ನಗರಸಭೆ ಮಾಡಲು ಅಲ್ಲಿನ ಜನಸಂಖ್ಯೆಯ ಆದಾರದ ಮೇಲೆ ಸಾದ್ಯವಿಲ್ಲ,ಕರ್ಪೂರು ಗ್ರಾಮ ಪಂಚಾಯತಿ ಹಾಗೂ ಬ್ಯಾಗಡದೇನಹಳ್ಳಿ ಒಟ್ಟಿಗೆ ಸೇರಿಸಿ ಪುರಸಭೆ ಮಾಡಿದರೆ ಅಭಿವೃದ್ಧಿ ಹೇಗೆ ಸಾದ್ಯ, ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಹೀಗೆ ಮಾಡಲು ಮುಂದಾಗಿದ್ದಾರೆ ಎಂದು ಹಿರಿಯ ಪತ್ರಕರ್ತ ಸಿ.ಆರ್.ವಿಜಯ್ ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ರೆಡ್ಡಿ, ಹಂದೇನಹಳ್ಳಿ ಗ್ರಾ ಪಂ ಅಧ್ಯಕ್ಷ ಸತೀಶ್, ಚಿನ್ಮಯ ಸೇವಾ ಸಂಸ್ಥೆಯ ಮಹೇಶ್ ವಕೀಲ ಪುರುಷೋತ್ತಮ್. ಜೈಬೀಮ್ ಯುವ ವೇದಿಕೆ ಕಾರ್ಯದರ್ಶಿ ಲೋಕೇಶ್ ಮತ್ತಿತರರು ಇದ್ದರು.
