ಚುಚ್ಚುಮದ್ದು ನರಕ್ಕೆ ನೀಡಿದ ಹಿನ್ನಲೆ ಕಾಲಿನ ಸ್ವಾದೀನ ಕಳೆದುಕೊಂಡ 9 ವರ್ಷದ ಬಾಲಕ ಗಿರೀಶ್
1 min read
ತುಮಕೂರು : ೯ ವರ್ಷದ ಬಾಲಕನ ಎಡಗಾಲಿನ ಸೊಂಟಕ್ಕೆ ನೀಡಬೇಕಿದ್ದ ಚುಚ್ಚುಮದ್ದು ನರಕ್ಕೆ ನೀಡಿದ ಹಿನ್ನಲೆ ಬಾಲಕ ಕಾಲಿನ ಸ್ವಾದೀನ ಕಳೆದುಕೊಂಡಿದ್ದಾನೆಂದು ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣ್ಣದ ರಾಘವೇಂದ್ರ ಆಸ್ಪತ್ರೆಯ ವಿರುದ್ಧ ಪೋಷಕರ ಆರೋಪಿಸುತ್ತಿದ್ದಾರೆ. ಸರಿಯಾದ ಜಾಗಕ್ಕೆ ಇಂಜೆಕ್ಷನ್ ನೀಡದೇ ನರದ ಮೇಲೆ ಇಂಜೆಕ್ಷನ್ ಕೊಟ್ಟಿದ್ದಾರೆ, ಮಧುಗಿರಿ ತಾಲೂಕಿನ ಕೃಷ್ಣಯ್ಯನಪಾಳ್ಯ ಗ್ರಾಮದ ಗಂಗರಾಜು ಎಂಬುವರ ಮಗ ಗಿರೀಶ್ ಕಾಲಿಗೆ ಸ್ವಾದೀನ ಇಲ್ಲ..
ಕಳೆದ ಫೆಬ್ರವರಿ 6 ರಂದು ಬಾಲಕ ಆಸ್ಪತ್ರೆಗೆ ಹೋಗಿದ್ದಾಗ ಆಸ್ಪತ್ರೆಯ ನರ್ಸ್ ಸರಿಯಾಗಿ ಇಂಜೆಕ್ಷನ್ ನೀಡಿಲ್ಲವೆಂದು ಪೋಷಕರು ಆರೋಪಿಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಿದ್ದಾರ್ಥ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಘವೇಂದ್ರ ಆಸ್ಪತ್ರೆ ನರ್ಸ್ ಸರಿ ಯಾಗಿ ಇಂಜೆಕ್ಷನ್ ನೀಡದ ಹಿನ್ನೆಲೆ..ಆರೋಗ್ಯ ಇಲಾಖೆಗೆ ದೂರು ನೀಡಿದರು.
