ಜಗದೀಶ ಶೆಟ್ಟರ್ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಯ್ತಲ್ಲ, ಯುಪಿ, ಬಿಹಾರಕ್ಕೆ ಎಷ್ಟು ಬರತ್ತೆ ಧ್ವನಿ ಎತ್ತಿ-ಸಚಿವ ಎಚ್ ಕೆ ಪಾಟೀಲ್
1 min read
ಗದಗ : ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಜಮೆ ಆಗದ ಕುರಿತು ಜಗದೀಶ ಶೆಟ್ಟರ್ ಹೇಳಿಕೆ ವಿಚಾರವಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ್ ತಿರುಗೇಟು ನೀಡಿದರು. ಗದಗ ನಗರದಲ್ಲಿ ಮಾತನಾಡಿದ ಅವರು ಯಾರಾದ್ರೂ ಏನಾದ್ರೂ ಅಂದ್ರೆ ಸುಮ್ಮನಿರಬಹುದು, ಬರಗಾಲ ಬಿದ್ದು ಬರಗಾಲ ಪೂರ್ಣ ಹೋಗಿ ನಾವು ಸುಪ್ರಿಂ ಕೋರ್ಟಗೆ ಹೋದಾಗ ಸಹಿತ ಪರಿಹಾರ ನೀಡದೇ ಇರೋರು ಶೆಟ್ಟರ್, ಎರಡು ತಿಂಗಳ ತಡ ಆಗಿದ್ದಕ್ಕೆ ಸರಕಾರಕ್ಕೆ ನೀವೇನು ಹಂಗಾತು ಹಿಂಗಾತು ಅನ್ನೋದಕ್ಕೆ ನೈತಿಕ ಹಕ್ಕಿದೆ.
ಕರ್ನಾಟಕದ ಜನರ ಬಗ್ಗೆ ನಿಮಗೆ ಕಾಳಜಿ ಇದ್ರೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಯ್ತಲ್ಲ, ಯುಪಿ, ಬಿಹಾರಕ್ಕೆ ಎಷ್ಟು ಬರತ್ತೆ ಧ್ವನಿ ಎತ್ತಿ, ಯಾಕೆ ಧ್ವನಿ ಎತ್ತಲು ಆಗ್ತಾ ಇಲ್ಲ ನೀವು ಕರ್ನಾಟಕದ ಹಿತ ಕಾಪಾಡ್ತೀರಾ? ಸಂಬಳ ಬರುವಂತೆಯೇ ರೆಗ್ಯುಲರ್ ಆಗಿ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ಮುಟ್ಟಿಸಲು ಸರ್ವ ಪ್ರಯತ್ನ ಮಾಡ್ತೇವೆ. ಯಾವ ಕಾರಣಕ್ಕೂ ವಿಳಂಬ ಆಗದೇ ಇರೋ ಹಾಗೆ ನೋಡ್ತೇವೆ. ವಿಳಂಬ ಆಗಿದ್ರೆ ಸರಿದೂಗಿಸೋ ಕೆಲಸ ಮಾಡ್ತೇವೆ. ಕೆಲವು ತಾಂತ್ರಿಕ ತೊಂದರೆಯಿಂದ ಡಿಲೇ ಆಗಿದೆ. ಹಣದ ಅಭಾವದಿಂದ ಆಗಿಲ್ಲ ಎಂದು ಹೇಳಿದರು.
