
ಶಿವಮೊಗ್ಗ : ಆನಂದಪುರ ಸಮೀಪದ ಇರುವಕ್ಕಿ ಗ್ರಾಮದಲ್ಲಿ ಸಾಲದ ಬಾಧೆ ತಾಳಲಾರದೆ ರೈತ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರುವಕ್ಕಿ ಗ್ರಾಮದ ಯೇಗಮ್ಮ(58) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತಮ್ಮ ಹೊಲದಲ್ಲಿ ಬೆಳೆ ಬೆಳೆಯಲು ಕೃಷಿ ಸಾಲವಾಗಿ ಡಿಸಿಸಿ ಬ್ಯಾಂಕ್, ನಂದಿತಳೆ ಸೊಸೈಟಿ , ಹಾಗೂ ಎಲ್ಐಸಿ ಎಲ್ಲಿ ಒಟ್ಟು 2 ರಿಂದ 3 ಲಕ್ಷ ಸಾಲ ಮಾಡಿದ್ದು ಮಳೆ ಸರಿಯಾಗಿ ಬಾರದೆ ಬೆಳೆಯಲ್ಲಿ ನಷ್ಟ ಕಂಡಿದ್ದರಿಂದ ಯೇಗಮ್ಮ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಹೊಲದಲ್ಲಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
