ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡು ಮಧ್ಯರಾತ್ರಿ ಬೈಕ್ ಕದ್ದು ಪರಾರಿಯಾದ ಖದೀಮರು…
1 min read
ಬೀದರ್ : ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬ್ಯಾಂಕ್, ಎಟಿಎಂ ರಾಬರಿ ನಡಿತಿತ್ತು, ಇದೀಗ ಮಾಸ್ಕ್ ಹಾಕಿಕೊಂಡು ಬೈಕ್ ಲಾಕ್ ಓಪನ್ ಮಾಡಿ ಕ್ಷಣಾರ್ಧದಲ್ಲಿ ಅಲ್ಲಿಂದ ಬೈಕ್ ಸಮೇತ ದರೋಡೆಕೋರು ಪರಾರಿಯಾಗ್ತಿದ್ದಾರೆ . ಬೀದರ್ ನ ಚಿದ್ರಿಯ ವಾರ್ಡ್ ನಂಬರ್ 24 ರಲ್ಲಿ ಘಟನೆ ನಡೆದಿದೆ, ಸಂಜು ಎಂಬುವರಿಗೆ ಸೇರಿದ ಬೈಕ್ ಕದ್ದು ಖದೀಮರು ಪರಾರಿಯಾಗಿದ್ದಾರೆ .
ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ಬೈಕ್ ಕದ್ದು ಪರಾರಿಯಾಗಿದ್ದಾರೆ . ಆದ್ರೆ ಬೈಕ್ ಪೆಟ್ರೋಲ್ ಗೆ ಲಾಕ್ ಇದ್ದ ಕಾರಣ 500 ಮೀಟರ್ ದೂರದಲ್ಲೇ ಬೈಕ್ ಬಿಟ್ಟು ಹೋಗಿದ್ದಾರೆ . ದರೋಡೆಕೋರರು ಬೈಕ್ ಕದಿಯುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಕ್ಕೂ ಮೊದಲು ಮನೆಯ ಭೀಗ ಮುರಿದು ಚಿನ್ನಾಭರಣ ಮತ್ತು ಹಣ ದರೋಡೆ ಮಾಡಿದ್ದರು.
ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….
