ರಾಜ್ಯದಲ್ಲಿ ಮುಂದುವರೆದ ಮೈಕ್ರೋ ಫೈನಾನ್ಸ್ ಹಾವಳಿ..ಹುಬ್ಬಳ್ಳಿಯಲ್ಲಿ ಬಡ್ಡಿ ಕಿರುಕುಳಕ್ಕೆ ಮತ್ತೊಂದು ಬಲಿ
1 min read
ಹುಬ್ಬಳ್ಳಿ : ಮೈಕ್ರೋ ಫೈನಾನ್ಸ್ ಹಾವಳಿ ರಾಜ್ಯದಲ್ಲಿ ಮುಂದುವರೆದಿದ್ದು, ಹುಬ್ಬಳ್ಳಿಯಲ್ಲಿ ಬಡ್ಡಿ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಬಡ್ಡಿ ಕಿರುಕುಳದಿಂದಾಗಿ ಹುಬ್ಬಳ್ಳಿಯ ಉಣಕಲ್ ನಿವಾಸಿ ಶಿವಾನಂದ ಕಳ್ಳಿಮನಿ (36) ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಿವಾನಂದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾರ್ತಿಕ್ ಬಳ್ಳಾರಿ ಎಂಬುವವರ ಬಳಿ ಹಲವು ತಿಂಗಳುಗಳ ಹಿಂದೆ 4 ಲಕ್ಷ ಸಾಲ ಪಡೆದಿದ್ದು, ನಿರಂತರ ಬಡ್ಡಿ ಕಿರುಕುಳದಿಂದಾಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಾನಂದ ಮೃತದೇಹ ಕಿಮ್ಸ್ ನ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಕಿಮ್ಸ್ ನ ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
