ಹಳ್ಳಿಗಳಲ್ಲಿ ಚಿರತೆ ಪ್ರತ್ಯಕ್ಷ, ಧನ- ಕರುಗಳ ಮೇಲೆ ದಾಳಿ
1 min read
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನಲ್ಲಿ ಬರುವ ಮಂಗಳಗುಡ್ಡ ಹಾಗೂ ಬಾಚನ ಗುಡ್ಡ ಚಿಮ್ಮಲಗಿ ಪಟ್ಟದಕಲ್ಲು ಹೀಗೆ ಹಲವಾರು ಗ್ರಾಮಗಳಲ್ಲಿ ರೈತರಿಗೆ ಚಿರತೆ ಪ್ರತ್ಯಕ್ಷಗೊಂಡಿದೆ. ಅಲ್ಲದೇ ಚಿರತೆ ರಾತ್ರಿ ವೇಳೆ ಆಕಳು ಮತ್ತು ಕರು ವನ್ನು ಸಾಯಿಸಿ ತಿಂದೋಗಿರುವ ಘಟನೆಗಳು ನಡೆದಿವೆ. ಜತೆಗೆ ಚಿರತೆಯ ಸಂಚಾರದಿಂದ ಜನರು ಅತಂಕದಲ್ಲಿದ್ದಾರೆ.ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಗುಡ್ಡದಲ್ಲಿ ಚಿರತೆ ಓಡುತ್ತಿರುವ ದೃಶ್ಯಾವಳಿಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
