ಶಬರಿಮಲೆಗೆ ಹೋದ ಪತಿ, ಪತ್ನಿ ಸ್ನೇಹಿತನ ಜೊತೆ ಪರಾರಿ, ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣಾದ ಪತಿ!
1 min read
ಶಬರಿಮಲೆಗೆ ಹೋದ ಪತಿ, ಸ್ನೇಹಿತನ ಜೊತೆ ಪತ್ನಿ ಪರಾರಿ,ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣಾದ ಪತಿ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಪಟ್ಟಣದ ಗಟ್ಟಿ ಲೇಔಟ್ ಬಡಾವಣೆಯ ನಾಗೇಶ್ ಎಂಬಾತ ಫೇಸ್ ಬುಕ್ ಗೆ ವಿಡಿಯೋ ಹರಿಬಿಟ್ಟು ನೇಣಿಗೆ ಶರಣಾಗಿದ್ದಾನೆ.
ನನ್ನ ಸಾವಿಗೆ ಪತ್ನಿ ರಂಜಿತಾ ಹಾಗೂ ಸ್ನೇಹಿತ ಭರತ್ ಕಾರಣ ಎಂದು ಹೇಳಿ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾನೆ. 12 ವರ್ಷದ ಹಿಂದೆ ರಂಜಿತಾ ನಾಗೇಶ್ ಪ್ರೀತಿಸಿ ಮದುವೆಯಾಗಿದ್ದರು, ಎರಡು ಮಕ್ಕಳಿದ್ದರೂಪತ್ನಿ ರಂಜಿತಾ ಅನೈತಿಕ ಸಂಬಂಧ ಹೊಂದಿದ್ದಳು.
ವಿಡಿಯೋ ನೋಡಿದ ಹಲವು ಸ್ನೇಹಿತರು ಮನೆಯತ್ತ ಬರುವ ವೇಳೆಗೆ ನಾಗೇಶ್ ಸಾವನ್ನಪ್ಪಿದ್ದಾನೆ.
ನಾಗೇಶ್ ಪತ್ನಿ ರಂಜಿತಾ ಆತನ ಪ್ರಿಯಕರ ಭರತ್ ನೊಂದಿಗೆ ಇಬ್ಬರು ಪರಾರಿಯಾಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದಿದ್ದಾನೆ ನಾಗೇಶ್.ಗುಬ್ಬಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ..
