[t4b-ticker]

ಚಿಕ್ಕೋಡಿ: ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡಿದ ಸಚೀವ ಸಂತೋಷ ಲಾಡ್

1 min read
Share it

https://youtu.be/oZLaOkHHMHE

ಚಿಕ್ಕೋಡಿ: ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡಿದ ಸಚೀವ ಸಂತೋಷ ಲಾಡ್

ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ  ಅವರ ಸೇನೆಯಲ್ಲಿ 60 ಸಾವಿರ ಮುಸ್ಲಿಂ ಸೈನ್ಯಗಳಿದ್ದರು. 12 ಜಾತಿಗಳನ್ನು ಸೇರಿಸಿ ಸ್ವರಾಜ್ಯ ನಿರ್ಮಿಸಿ ಇತಿಹಾಸ ಸೃಷ್ಟಿಸಲಾಗಿದೆ. ಇಂದಿನ ಯುವಕರು ಇತಿಹಾಸ ಓದಬೇಕು. ದೇಶದಲ್ಲೇ ಪ್ರಥಮ ಬಾರಿಗೆ ಮೀಸಲಾತಿ ನೀಡಿದ ಶಾಹು ಮಹಾರಾಜರು. ಸಯಾಜಿರಾವ್ ಗಾಯಕವಾಡ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡಿದರು ಮತ್ತು ಅವರು ಸಂವಿಧಾನವನ್ನು ಬರೆದರು, ಇಂದು ಅದೇ ಮರಾಠ ಸಮುದಾಯವು ಮೀಸಲಾತಿಗಾಗಿ ಬೀದಿಗೆ ಬರಬೇಕಾಗಿದೆ. ಮೀಸಲಾತಿಯ ಅವಶ್ಯಕತೆ ಇದೆ ಆದರೆ ಮೀಸಲಾತಿ ಮಾತ್ರ ಕೆಲಸ ಮಾಡುವುದಿಲ್ಲ ಆದರೆ ಮರಾಠ ಬಂಧುಗಳು ತಮ್ಮ ಮಕ್ಕಳನ್ನು ಜಗಳಕ್ಕೆ ಕಳುಹಿಸುವ ಬದಲು ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ತಾಲೂಕಿನ ಸದಲಗಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದೆ ಶಿವಾಜಿ ಮಹಾರಾಜರು ತಮ್ಮ ಕಾಲದಲ್ಲಿ ಒಬ್ಬ ಮಹಿಳೆಯನ್ನೂ ಬಂಧಿಸಿಲ್ಲಿಲ್ಲ ಎಂದರು. ವಿಯೆತ್ನಾಮ್ ದೇಶ ಶಿವಾಜಿ ಅವರ ಗೆರಿಲ್ಲಾ ಯುದ್ಧ ಕಲೆ ಬಳಕೆಯಿಂದಾಗಿ ಯುದ್ಧವನ್ನು ಗೆದ್ದಿತು. ಶಿವಾಜಿ ಮಹಾರಾಜರ ಆದರ್ಶವನ್ನು ಇಂದಿನ ಯುವಕರು ಅನುಸರಿಸಬೇಕಾಗಿದೆ. ಯಾವುದೇ ಪಕ್ಷದಾಲ್ಲಿ ಇದರು ಮರಾಠ ಸಮುದಾಯದವರು ಸಮುದಾಯಕ್ಕಾಗಿ ಒಂದಾಗಬೇಕು. ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ ಏಕತೆಯೇ ಏಕತೆ.

ಮರಾಠ ಸಮಾಜ ಒಗ್ಗಟ್ಟಾಗಿ ದೇಶದಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಚಿಂತನೆ ನಡೆಸಬೇಕು.

ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರೂ  ಶಿವರಾಯರ ಪ್ರತಿಮೆಗೆ 25 ಲಕ್ಷ ರೂಪಾಯಿ ನೀಡಿ ಅವರ ಕನಸನ್ನು ನನಸು ಮಾಡಿದ್ದಾರೆ. ಅವರಿಗೆ ಸಮುದಾಯ ವತಿಯಿಂದ ಧನ್ಯವಾದ ಹೇಳುತ್ತೇನೆ.

ಮುಖ್ಯಮಂತ್ರಿ ಆಗುವ ಸ್ಥಾನಮಾನ ಪ್ರಕಾಶ್ ಹುಕ್ಕೇರಿಗೆ  :ಪ್ರಕಾಶ ಹುಕ್ಕೇರಿ ಹಿರಿಯ ನಾಯಕರಾಗಿದ್ದು, 75ರ ಹರೆಯದಲ್ಲೂ ತಮಗೆ ಯುವಕರಂತೆ ಕೆಲಸ ಮಾಡುತ್ತಿದ್ದಾರೆ.

ನಾನು ಮರಾಠಾ ಸಮಾಜದ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ, ಇತಿಹಾಸವನ್ನು ಬದಿಗಿಟ್ಟು ಮುಂದೇನು ಮಾಡಬೇಕೆಂದು ಯೋಚಿಸಬೇಕಾಗಿದೆ ಎಂದು ಹೇಳಿದರು.

ಮರಾಠರು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮಾಜ ವಾಗಿದೆ ಎಂದರು.

 

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?