ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯ: ಗಡಿ ಜಿಲ್ಲೆಯಲ್ಲಿ ಮುಚ್ಚಿದ ಕನ್ನಡ ಶಾಲೆ!
1 min read
ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಕ್ಲೋಸ್ ಆಗಿದೆ, ವಿದ್ಯಾರ್ಥಿಗಳ ಕೊರತೆಯ ನೆಪ ಹೇಳಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸರ್ಕಾರಿ ಶಾಲೆ ತಾತ್ಕಾಲಿಕವಾಗಿ ಕ್ಲೋಸ್ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಪ್ಪರವಾಡಿ ಗ್ರಾಮದ ಸರ್ಕಾರಿ ಶಾಲೆ ಕ್ಲೋಸ್ ಆಗಿರೋದು, ಕಳೆದ ವರ್ಷ ಒಬ್ಬನೇ ಒಬ್ಬ ವಿದ್ಯಾರ್ಥಿ ದಾಖಲಾತಿ ದಾಖಲಾಗಿದ್ದ, ವಿದ್ಯಾರ್ಥಿಗಳು ಹಾಜರಾತಿ ಇಲ್ಲದಕ್ಕೆ ಶಾಲೆ ತಾತ್ಕಾಲಿಕ ಕೋಸ್ಲ್ ಮಾಡಲಾಗಿದೆ. ಶಿಕ್ಷಣ ಇಲಾಖೆ ನಿರ್ಲಕ್ಷಕ್ಕೆ ಶಾಲೆ ಕನ್ನಡ ಶಾಲೆ ಮುಚ್ಚಿರೋದು ಮೇಲ್ನೋಟಕ್ಕೆ ಕಂಡುಬರ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಕ್ಲೋಸ್ ಆದ ಪರಿಣಾಮ ದನಕರುಗಳ ಅಡ್ಡೆಯಾಗಿ ಬದಲಾಗಿದೆ ಶಾಲೆಯ ಆವರಣ. ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರ್ಕಾರಿ ಶಾಲೆ ಕ್ಲೋಸ್ ಆಗಿದ್ದು ಗಡಿಯಲ್ಲಿ ಕನ್ನಡ ಶಾಲೆಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ…..
