ಮಂಗಳೂರಿನ ಫುಟ್ ಬಾಲ್ ಟೂರ್ನಮೆಂಟ್ ನಲ್ಲಿ ಪ್ರೇಕ್ಷಕರ ಗ್ಯಾಲರಿ ಕುಸಿತ.
1 min read
ಮಂಗಳೂರಿನ ಎಮ್ಮೆಕೆರೆ ಬಳಿ ಫುಟ್ ಬಾಲ್ ಟೂರ್ನಮೆಂಟ್ ನಲ್ಲಿ ಏಕಾಏಕಿ ಪ್ರೇಕ್ಷಕರ ಗ್ಯಾಲರಿ ಕುಸಿದಿದೆ. ಫೆಬ್ರವರಿ 8 ರಂದು ರಾತ್ರಿ ನಡೆದ ಘಟನೆಯ ದೃಷ್ಯ ವೈರಲ್ ಆಗಿದ್ದು, BSL ವತಿಯಿಂದ ಆಯೋಜಿಸಿದ್ದ ಫುಟ್ ಬಾಲ್ ಟೂರ್ನಮೆಂಟ್ ಗ್ಯಾಲರಿ ಕುಸಿತದಲ್ಲಿ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪ್ರೇಕ್ಷಕರು ಪಾರಾಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ.
ಬೊಳಾರ್ ಸೂಪರ್ ಲೀಗ್ ನಿಂದ ಫುಟ್ ಬಾಲ್ ಕ್ರೀಡೆ ಆಯೋಜನೆ ಮಾಡಲಾಗಿತ್ತು, ಗ್ಯಾಲರಿ ಬಿದ್ದ ಕೂಡಲೆ ಚಲ್ಲಾಪಿಲ್ಲಿ ಆದ ಪ್ರೇಕ್ಷಕರು. ಸೀದಾ ಆಟದ ಮೈದಾನಕ್ಕೆ ನುಗ್ಗಿದ್ರು. ಅದನ್ನು ಸರಿಪಡಿಸಲು ಒದ್ದಾಡಿದ ಆಯೋಜಕರು 1 ಗಂಟೆಗಳ ನಂತರ ಮತ್ತೆ ಆಟ ಆರಂಭಿಸಿದ್ರು…..
