ವಕ್ಫ್ ಬೋರ್ಡ್ ಆಡಿಟರ್ ಹಾಗೂ ಆಡಿಟರ್ ಸಹೋದರ ಲೋಕಾಯುಕ್ತ ಬಲೆಗೆ
1 min read
ವಿಜಯಪುರ ನಗರದ ಐಬಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆಸಿ ವಿಜಯಪುರ ವಕ್ಫ್ ಬೋರ್ಡ್ನ ಆಡಿಟರ್ ಮಹಮ್ಮದ್ ಹಾಗೂ ಸಹೋದರ ಮುಜಾಹಿದ್ದೀನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಒಂದುವರೆ ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ , ವಕ್ಫ್ ಬೋರ್ಡ್ ಆಧೀನದಲ್ಲಿ ಬರುವ ಕಮೀಟಿ ನವೀಕರಣ ಮಾಡಲು ಲಂಚದ ಬೇಡಿಕೆ ಇಟ್ಟಿದ್ದರು ಈ ಹಿನ್ನೆಲೆಯಲ್ಲಿ ಖಾಜಾಸಾಬ್ ನದಾಫ್ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆಡಿಟರ್ ಮಹಮ್ಮದ್ ಮೊಸಿನ್ ಹಾಗೂ ಆತನ ಸಹೋದರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ…
ಕಮಿಟಿಯ ರಿನ್ವಲ್ ಗಾಗಿ ಒಂದೂವರೆ ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರ ಬಗ್ಗೆ ಖಾಜಾಸಾಬ್ ಬಾಬು ನದಾಫ್ ಪಿರಿಯಾದಿ ನೀಡಿದ್ದರ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲಾಗಿ ಒಂದುವರೆ ಲಕ್ಷ ಲಂಚದ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಆಪಾದಿತರಾದ ಮಹಮ್ಮದ್ ಮೊಸಿನ್ ಜಮಖಂಡಿ ಹಾಗೂ ಅವನ ಸಹೋದರ ಮುಜಾಹಿದ್ ಜಮಖಂಡಿ ಜಿಲ್ಲಾ ಆಸ್ಪತ್ರೆ ವಿಜಯಪುರ ಆವರಣದಲ್ಲಿ ಹಣ ಪಡೆದುಕೊಳ್ಳುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದು ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ…
