ಧಾರವಾಡ ಕ್ಯಾರಕೊಪ್ಪ ಗ್ರಾಮದಿಂದ ಕಾಣೆಯಾಗಿದ್ದ ಮೂರು ಮಕ್ಕಳು ಹುಬ್ಬಳ್ಳಿಯಲ್ಲಿ ಪತ್ತೆ
1 min read
ಧಾರವಾಡ: ಕ್ಯಾರಕೊಪ್ಪ ಗ್ರಾಮದ ಶಾಲೆಗೆಂದು ಹೋಗಿದ್ದ ಮೂವರು ಸಹೋದರಿಯರು ನಿನ್ನೆ ಕಾಣೆಯಾಗಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ ಈ ಹಿನ್ನೆಲೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು, ಪೊಲೀಸರು ಸಹಾಯದಿಂದ ಮಕ್ಕಳ ಹುಡುಕಾಟ ನಡೆಸಿ ಹಳೇ ಹುಬ್ಬಳ್ಳಿ ದರ್ಗಾದಲ್ಲಿ ಮಕ್ಕಳನ್ನು ಪತ್ತೆ ಮಾಡಲಾಗಿದೆ. ರಮಜಾನಬೀ (12), ಫಾತೀಮಾ (10) ಹಾಗೂ ಮಾಹೀರಾ (6) ಪತ್ತೆಯಾದ ಬಾಲಕಿಯರು. ದರ್ಗಾದಲ್ಲಿ ಮಕ್ಕಳು ಮಲಗಿದ್ದನ್ನ ನೋಡಿ ವಿಚಾರಿಸಿದ್ದ ಸ್ಥಳಿಯರು ಕ್ಯಾರಕೊಪ್ಪ ಗ್ರಾಮದಿಂದ ಬಂದಿರುವ ಬಗ್ಗೆ ಹೇಳಿದ್ದಾರೆ ಮಕ್ಕಳು. ಈ ಸಮಯದಲ್ಲಿ ಪೊಲೀಸರು ಕೂಡಾ ಹುಡುಕಾಟ ನಡೆಸ್ತಿದ್ರಿಂದ ಕ್ಯಾರಕೊಪ್ಪ ಗ್ರಾಮದ ಮಕ್ಕಳು ಎಂದು ತಿಳಿದು ದರ್ಗಾಗೆ ಹೋದ ಧಾರವಾಡ ಗ್ರಾಮೀಣ ಪೊಲೀಸರು.
ದರ್ಗಾದಿಂದ ಮಕ್ಕಳನ್ನ ತಂದು ಪೋಷಕರಿಗೆ ಒಪ್ಪಿಸಿದ್ದಾರೆ. ಈ ವೇಳೆ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಪೋಷಕರಿಗೆ ಬುದ್ದಿ ಹೇಳಿದ್ದಾರೆ ಪೊಲೀಸರು….
