[t4b-ticker]

ಡಿಕೆ ಶಿವಕುಮಾರ್ ಗೆ ಒಳಗೆ ಸಿಎಂ ಪಟ್ಟದ ಬೇಗುದಿ ಇದೆ, ಬಹಿರಂಗವಾಗಿ ಅದನ್ನು ಹೇಳೋಕೆ ಆಗುತಿಲ್ಲ- ಪ್ರಲ್ಹಾದ್ ಜೋಶಿ

1 min read
Share it

ಹುಬ್ಬಳ್ಳಿ : ಕರ್ನಾಟಕ ಸರ್ಕಾರ ದಿವಾಳಿಯಾಗಿದೆ ಎನ್ನಲು ಹಲವಾರು ಉದಾಹರಣೆ ಕಣ್ಣ್ಮುಂದೆ ಕಾಣುತ್ತಿವೆ. ಈಗ ಗೃಹ ಲಕ್ಷ್ಮಿ, ಅನ್ನ ಭಾಗ್ಯದ ಹೆಚ್ಚುವರಿ ಅಕ್ಕಿ ಇಲ್ಲ, ಹಣನೂ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೋದಿ‌ ಸರ್ಕಾರ ಅಂತ ಸಿಎಂ ಸಿದ್ದರಾಮಯ್ಯ ಯಾವಾಗಲೂ ಬೆಟ್ಟು ಮಾಡುತ್ತಾರೆ.ಮೆಟ್ರೊ ದರ ಏರಿ ಮಾಡಿ ಇಲ್ಲ ಅಂದ್ರು ಆಮೇಲೆ ಕಡಿಮೆ ನಾವೇ ಮಾಡಿದ್ದೇವೆ ಅಂದ್ರು. 28 ರೂಪಾಯಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಅಕ್ಕಿ‌‌ನೀಡಿಲು ಸಿದ್ಧವಿದೆ. ಈ ಬಗ್ಗೆ ಸಚಿವ ಕೆಎಚ್ ಮುನಿಯಪ್ಪ ಮೊದಲಿಗೆ ಸ್ಪಂದನೆ ಮಾಡಿದ್ರು. ಆದರೆ ಇಲ್ಲಿಯವರೆಗೆ ರಾಜ್ಯ ಆರ್ಡರ್ ನೀಡಿಲ್ಲ. ಕೇಂದ್ರದಿಂದ ಅಕ್ಕಿ ಖರೀದಿ ಮಾಡಲು ರಾಜ್ಯ ಸರ್ಕಾರ ಸಿದ್ಧವಿಲ್ಲ. 2 ಸಾವಿರ 80 ಕೋಟಿ ರಾಜ್ಯಕ್ಕೆ ಉಳಿತಾಯ ಆಗುತ್ತೆ. ಆದರೆ ಇದನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಯಾಕೆಂದರೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದರು. ರಾಜ್ಯ ಸರ್ಕಾರ ಒಂಬತ್ತು ವಿವಿಗಳ ಬಂದ್ ಮಾಡುವ ತೀರ್ಮಾನ ಮಾಡಿದೆ. ಇದರ ಅರ್ಥ ರಾಜ್ಯ ಸರ್ಕಾರ ದಿವಾಳಿ ಹಂತಕ್ಕೆ ಬಂದು ನಿಂತಿದೆ.. ಹಾಲಿನದರ, ಪೆಟ್ರೋಲ್, ಜನನ ಮರಣ ಪತ್ರ ಸಹ ದರ ಸಹ ಜಾಸ್ತಿಯಾಗಿದೆ ಎಂದರು. ಕಾಂಗ್ರೆಸ್ ನಿರುದ್ಯೋಗಿ ನಾಯಕರ‌ ಕಡೆ ಮಾತನಾಡುಸುತ್ತಿದ್ದಾರೆ..

 

ಆರ್ ಎಸ್ ಎಸ್ ಬಗ್ಗೆ ನಿರುದ್ಯೋಗಿ ಲೀಡರ್ ಗಳು ಹೇಳಿಕೆ ನೀಡುತ್ತಿದ್ದಾರೆ. ಪಾಕಿಸ್ತಾನಕ್ಕೆ , ಭಯೋತ್ಪಾದಕರಿಗೆ ಬೆಂಬಲದ ರೀತಿಯಲ್ಲಿ ಈ ಹಿಂದೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದರು. ದೇಶವನ್ನು ಮಾರಿಯಾದ್ರು, ದೇಶದ ಹಿತವನ್ನು ಕಡೆಗಣಿಸಿಯಾದ್ರು ಅಧಿಕಾರದಲ್ಲಿ ಇರಬೇಕು ಎನ್ನುವುದು ಕಾಂಗ್ರೆಸ್ ನೀತಿ. ಹಿಂದೂ ವಿರೋಧ ನೀತಿಗೆ ಬಗ್ಗೆ ಮಾತನಾಡಿದ್ರೆ ಅವರಿಗೆ ಕಾಂಗ್ರೆಸ್ ನಲ್ಲಿ ಹುದ್ದೆ ಕೊಡುತ್ತಾರೆ.. ಹರಿಯಾಣ ಉಸ್ತುವಾರಿಗಳು ತಾವೇ ಪ್ರಧಾನಿಗಳಂತೆ ಮಾತನಾಡುತ್ತಿದ್ದಾರೆ ಎಂದರು. ಜಲಜೀವನ ಯೋಜನೆಯಲ್ಲೂ ಸಹ ರಾಜ್ಯ ಸರ್ಕಾರ ಕ್ಯಾತೆ ತೆಗೆದಿದೆ.
ಡಿಕೆ ಶಿವಕುಮಾರ್ ಅವರಿಗೆ ಒಳಗೆ ಎಷ್ಟು ಬೇಗುದಿ ಇದೆ ಅಂತ ಅವರಿಗೆ ಗೊತ್ತಿದೆ. ಬಹಿರಂಗವಾಗಿ ಅದನ್ನು ಹೇಳೋಕೆ ಆಗುತಿಲ್ಲ. ಎರಡು ವರೆ ವರ್ಷ ಅಧಿಕಾರವಧಿ ಚರ್ಚೆ ಆಗಿದ್ದು ಹೊರಗೆ ಬಿಟ್ಟಿದ್ದು ಯಾರು? ಸೋನಿಯಾ ಗಾಂಧಿ, ಮಹಾನ್ ನಾಯಕ್ ರಾಹುಲ್ ಗಾಂಧಿ ಬಳಿ ಚರ್ಚೆ ಆಗಿದ್ದು ನಮಗೆ ಹೇಗೆ ಗೊತ್ತಾಗುತ್ತದೆ. ಆ ವಿಚಾರ ಹೊರಗೆ ಬಿಟ್ಟಿದ್ದು ಯಾರು? ಸುಮ್ಮೆ ಒಳಗೊಳಗೆ ಬೇಗುದಿ,ಇದೆ ಬಹಿರಂಗವಾಗಿ ಮಾತನಾಡುತಿಲ್ಲ. ಇದು ಸಹಜವಾಗಿ ಆಡಳಿತದ ಮೇಲೆ ಪರಿಣಾಮ ಬೀರಿದೆ ಎಂದರು. ಯತ್ನಾಳ್ ಗೆ ನೋಟಿಸ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ,ರಾಷ್ಟ್ರೀಯ ನಾಯಕರು ಕೊಟ್ಟಿದ್ದಾರೆ. ಅದನ್ನು ರಾಷ್ಟ್ರೀಯ ನಾಯಕರೇ ವಿಚಾರ ಮಾಡ್ತಾರೆ ಎಂದರು.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?