ನಿರ್ಮಾಣ ಹಂತದ ಬಿಲ್ಡಿಂಗ್ ಮೇಲಿಂದ ಕೆಳಗೆ ದೂಡಿ ಪತ್ನಿಯ ಕೊಲೆಗೈದ ಪತಿ.
1 min read
https://youtu.be/atQdol7uTfE?si=GC4_DSqE4_poUGfk
ಆನೇಕಲ್,ಫೆ,17: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಪತಿ ತನ್ನ ಪತ್ನಿಯನ್ನು ನಿರ್ಮಾಣ ಹಂತದ ಕಟ್ಟದ ಮೇಲಕ್ಕೆ ಹೊತ್ತೋಯ್ದು ಕೆಳಕ್ಕೆ ದೂಡಿ ಕೊಲೆ ಮಾಡಿದ ಘಟನೆ ತಾಲೂಕಿನ ಸರ್ಜಾಪುರ ತಿಗಳ ಚೌಡದೇನಹಳ್ಳಿ ಗ್ರಾಮದಲ್ಲಿ ನೆನ್ನೆ ರಾತ್ರಿ ನಡೆದಿದೆ.
ಸುಮಾರು 09 ಗಂಟೆ ಸುಮಾರಿಗೆ ನಡೆದಿರುವ ಘಟನೆ ಇದಾಗಿದ್ದು ಮಂಜುಳಾ(40) ಕೊಲೆಯಾದ ದುರ್ದೈವಿಯಾಗಿದ್ದಾಳೆ.
ಮಂಜುನಾಥ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಆಗಾಗ ಪತ್ನಿ ಜೊತೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ತೆಗೆಯುತ್ತಿದ್ದ ಪತಿ. ಈ ವೇಳೆ ಬಿಲ್ಡಿಂಗ್ ಮೇಲಿಂದ ದೂಡಿರುವ ಆರೋಪ ಹೊತ್ತಿದ್ದಾನೆ.
ಮೇಲಿಂದ ಬಿದ್ದ ಪರಿಣಾಮ ತಲೆಗೆ ತೀವ್ರ ಗಂಭೀರ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಪತ್ನಿ ಸಾವನ್ನಪ್ಪಿದ್ದಾಳೆ. ಸರ್ಜಾಪುರ ಪೊಲೀಸರಿಂದ ಆರೋಪಿ ಮಂಜುನಾಥ್ ವಶಕ್ಕೆ ಪಡೆದಿದ್ದಾರೆ.
