
ತುಮಕೂರು : ಕಾರು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ಕಂಪ್ಲಾಪುರ ಗ್ರಾಮದಲ್ಲಿ ನಡೆದಿದೆ.ಬಾದಾಮಿ ತಾಲೂಕಿನ ಗುಳೇದಗುಡ್ಡ ಮೂಲದ ಮಹಿಳೆ ಕಸ್ತೂರಿ (43) ಸಾವನಪ್ಪಿದ್ದ ದುರ್ದೈವಿಯಾಗಿದ್ದು, ಬಸವರಾಜು, ಶಾಂತಮ್ಮ, ವಿಶ್ವನಾಥ್, ಪಾವನಿಗೆ ಗಾಯಗೊಂಡಿದ್ದಾರೆ,ಗಾಯಾಳುಗಳಿಗೆ ಕುಣಿಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೈಸೂರಿಗೆ ತೆರಳುತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ, ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
