ಹಾಸನದ ಭೀಮ ಬಂದ ಓಡ್ರೋ ಓಡ್ರೋ; ಮೈಕ್ ಹಿಡಿದು ಸಾರುತ್ತಿರುವ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ!
1 min read
ಹಾಸನ ಜಿಲ್ಲೆಯಲ್ಲಿ ಸಕಲೇಶಪುರ ತಾಲ್ಲೂಕಿನ, ಉದೇವಾರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಪ್ರತಿ ವರ್ಷ ಕಾಡಾನೆಗಳ ದಾಳಿಗೆ ಹತ್ತಾರು ಜನರು ಬಲಿಯಾಗುತ್ತಲೇ ಇರುತ್ತಾರೆ. ರೈತರು, ತೋಟದ ಕೆಲಸಕ್ಕೆ ಹೋದ ಕಾರ್ಮಿಕರು, ವಾಹನ ಸವಾರರು ಸೇರಿದಂತೆ ಹಲವರು ಕಾಡಾನೆ ದಾಳಿಗೆ ತುತ್ತಾಗುತ್ತಿದ್ದಾರೆ. ಇದೀಗ ಕಾಡಾನೆಗಳ ಹಾವಳಿ ಜಮೀನುಗಳಿಗೆ ಸೀಮಿತವಾಗದೇ ನೇರವಾಗಿ ಊರಿಗೂ ಕಾಲಿಟ್ಟಿದೆ. ಹಾಸನದ ಭೀಮ ಎನ್ನುವ ಕಾಡಾನೆ ಇದೀಗ ಹಳ್ಳಿಯೊಂದಕ್ಕೆ ಬಂದಿದ್ದು, ಗಾಂಭೀರ್ಯವಾಗಿ ನಡೆಯುತ್ತಾ ಅಕ್ಕ ಪಕ್ಕದಲ್ಲಿ ಸಿಗುವ ಆಹಾರವನ್ನು ತಿನ್ನುತ್ತಾ ಸುತ್ತಾಡಿದೆ.ಇಟಿಎಫ್ ಸಿಬ್ಬಂದಿ ಜೀಪ್‌ನಲ್ಲಿ ಕುಳಿತು ಮೈಕ್ ಮೂಲಕ ಅನೌನ್ಸ್ ಮಾಡುತ್ತ ಸ್ಥಳೀಯರಿಗೆ ಭೀಮನ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಜನರು ಗಲಾಟೆ ಹೆಚ್ಚಾಗುತ್ತಲೇ ರಸ್ತೆಯಲ್ಲಿ ಕೆಲಕಾಲ ಅಡ್ಡ ನಿಂತ ಒಂಟಿಸಲಗ ,ಯಾರಿಗೂ ಅಂಜದೆ, ಅಳುಕದೆ ನೂರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ಭೀಮ ಸಾಗುತ್ತಿದ್ದಾನೆ.ಕೆಲಕಾಲ ರಸ್ತೆಯಲ್ಲಿ ನಿಂತು ಕಾಫಿ ತೋಟದೊಳಗೆ ಭೀಮ ಸಾಗಿದನು.
