ರಾತ್ರೋರಾತ್ರಿ ಅಕ್ರಮ ಕಲ್ಲು ಗಣಿಗಾರಿಕೆ ಲಾರಿ ಹಿಡಿದ ಗಣಿ-ಭೂವಿಜ್ಞಾನ ಇಲಾಖಾಧಿಕಾರಿಗಳು.
1 min read
https://youtu.be/Pa4Xde9Q32Q?si=-CYxCwPRV8fWOKWT
ರಾತ್ರೋರಾತ್ರಿ ಕಳ್ಳಸಾಗಣೆ ಮಾಡುತ್ತಿದ್ದ ಕಲ್ಲು ಗಣಿಗಾರಿಕೆಯ ಲಾರಿ ಹಿಡಿದ ಗಣಿ-ಭೂವಿಜ್ಞಾನ ಇಲಾಖಾಧಿಕಾರಿಗಳು.
ಕೋಲಾರ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ರಾತ್ರಿ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ತಮಿಳುನಾಡಿಗೆ ಕಲ್ಲು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಗುಂಡ್ಲಪಾಳ್ಳ ಗ್ರಾಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಕೋದಂಡರಾಮಯ್ಯ ನೇತೃತ್ವದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಅಕ್ರಮವಾಗಿ ಗಣಿಗಾರಿಕೆ ಮಾಡಿ ರಾತ್ರೋರಾತ್ರಿ ಕಲ್ಲು ಸಾಗಾಟ ಮಾಟುತ್ತಿದ್ದ ಜಾಲದ ಕುರಿತು ನಿಖರ ಮಾಹಿತಿ ಕಲೆ ಹಾಕಿ ಸ್ಥಳಕ್ಕೆ ಧಾವಿಸಿದ್ದ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಲಾರಿಗಳ ಸಮೇತ ಕಲ್ಲು ಸಾಗಣೆ ಸಿಕ್ಕಿ ಬಿದ್ದಿದೆ.
ಅಕ್ರಮವಾಗಿ ಕಲ್ಲು ತುಂಬಿದ್ದ ಮೂರು ಲಾರಿಗಳು ಮಾಸ್ತಿ ಪೊಲೀಸರ ವಶಕ್ಕೆ ನೀಡಲಾಗಿದ್ದು ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮುಂದಿನ ಕ್ರಮವನ್ನು ಜರುಗಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ.
