ಮುಡಾ ಹಗರಣದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. -ಲೋಕಾಯುಕ್ತ ಬಿ ಎಸ್ ಪಾಟೀಲ್.
1 min read
https://youtu.be/2Wjw-WOcM3k?si=nbf0pUSgevj1yBmz
ಮುಡಾ ಹಗರಣದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. -ಲೋಕಾಯುಕ್ತ ಬಿ ಎಸ್ ಪಾಟೀಲ್.
ಹುಬ್ಬಳ್ಳಿ,ಫೆ,16: ಮುಡಾ ಪ್ರಕರಣದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ, ತನಿಖೆಯು ಹಲವು ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ನಡೆಯುತ್ತಿದೆ, ಇದರಲ್ಲಿ ಯಾವುದೇ ರೀತಿಯ ಯಾರ ಹಸ್ತಕ್ಷೇಪವಿಲ್ಲ ಜೊತೆಗೆ
ಕಾನೂನು ಚೌಕಟ್ಟಿನಲ್ಲಿ ತನಿಖೆ ವೇಗವಾಗಿ ನಡೆಯುತ್ತಿದೆ ಎಂದು ಲೋಕಾಯುಕ್ತ ಬಿಎಸ್ ಪಾಟೀಲ್ ಹುಬ್ಬಳ್ಳಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮುಂದುವರೆದು ತನಿಖೆಯ ವಿವರ ತನಿಖಾಧಿಕಾರಿ ಹಾಗೂ ಮೇಲ್ವಿಚಾರಣಾಧಿಕಾರಿಗಳಿಗೆ ಮಾತ್ರ ಗೊತ್ತಿರುತ್ತದೆ, ನಾವೂ ಕೂಡ ಇದರಲ್ಲಿ ಮೂಗು ತೂರಿಸುವುದಿಲ್ಲ ಎಂದರು.
ಲೋಕಾಯುಕ್ತ ಇಲಾಖೆಯಲ್ಲಿ ಪ್ರಕರಣಗಳ ತನಿಖೆ ವಿಳಂಬ ವಿಚಾರ:
ಲೋಕಾಯುಕ್ತದಲ್ಲಿ ೩೩ ಸಾವಿರ ಪ್ರಕರಣಗಳಿವೆ.
ನಾನು ಬಂದ ನಂತರ ೧೧ ಸಾವಿರ ಪ್ರಕರಣಗಳನ್ನು ಪೂರ್ಣಗೊಳಿಸಿದ್ದೇವೆ. ಲೋಕಾಯುಕ್ತ ಸಂಸ್ಥೆ ಕಾರ್ಯವೈಖರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ, ಹೀಗಾಗಿ ಪ್ರಕರಣಗಳು ಹೆಚ್ಚೆಚ್ಚು ದಾಖಲಾಗುತ್ತಿವೆ.
ಲೋಕಾಯುಕ್ತ ಅಧಿಕಾರಿಗಳು ವಿವಿಧ ಕಚೇರಿಗಳಿಗೆ ಅನಿರೀಕ್ಷಿತ ದಿಢೀರ್ ಭೇಟಿ ನೀಡಿ ಪರಿಶೀಲನೆ, ತಂಡಗಳಾಗಿ ದಾಳಿಗಳನ್ನು ಮಾಡಲಾಗುತ್ತಿದೆ
ಸಂಬಂಧಿಸಿದವರನ್ನು ಕರೆಯಿಸಿ ವಿಚಾರಣೆ ಮಾಡಲಾಗುತ್ತಿದೆ, ಇಷ್ಟೆಲ್ಲಾ ಶ್ರಮ ವಹಿಸಲಾಗುತ್ತಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಬಾಕಿ ಹೆಚ್ಚಾಗಿದೆ ಬಿಟ್ಟರೆ ಕಾರ್ಯಚಟುವಟಿಕೆಗಳಲ್ಲಿ ವಿಳಂಬತೆಯಿಲ್ಲ, ಕೆಲಸಕ್ಕೆ ತಕ್ಕಂತೆ ಸಿಬ್ಬಂದಿ ಮೂಲ ಸೌಲಭ್ಯಗಳಿಲ್ಲ, ಹೀಗಾಗಿ ಪ್ರಕರಣಗಳ ಬಾಕಿ ಹೆಚ್ಚಾಗುತ್ತಿದೆ
ಕಚೇರಿ ಸ್ಥಳದ ಅಭಾವಯಿದೆ. ಇವೆಲ್ಲವೂ ಬಗೆಹರಿದರೆ ಇನ್ನೂ ತ್ವರಿತ ಮಟ್ಟದಲ್ಲಿ ಜನರಿಗೆ ನ್ಯಾಯವನ್ನು ತಲುಪಬಹುದಾಗಿದೆ. ಆದರೆ ಇವೆಲ್ಲವನ್ನೂ ಮೀರಿ ಲೋಕಾಯುಕ್ತ ಉತ್ತಮ ಕಾರ್ಯನಿರ್ವಹಿಸುತ್ತಿದೆ
ಬೆಂಗಳೂರಿನ ೮ ಜೋನ್‌ಗಳ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಪ್ರತಿ ತಿಂಗಳು ವಿಚಾರಣೆಯಿರುತ್ತದೆ
ಈ ಪ್ರಕರಣಗಳ ಪ್ರಗತಿ ಪ್ರತಿಯೊಂದಕ್ಕೂ ಸಮಯ ಹಿಡಿಯುತ್ತದೆ
ಶಿಕ್ಷೆ ಕೊಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದರ ಹಿಂದೆ ಸಾಕಷ್ಟು ತನಿಖೆ, ವಿಚಾರಣೆ, ದಾಖಲೆ ಪರಿಶೀಲನೆಯಂತಹ ಸುದೀರ್ಘ ಶ್ರಮವಿರುತ್ತದೆ
ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ, ಆಗಿರುವ ನ್ಯೂನ್ಯತೆಯನ್ನು ಸರಿ ಮಾಡುವ ಕೆಲಸವೂ ಆಗಬೇಕು
ರಾಜ್ಯದ ಸರಕಾರಿ ಕೆರೆ ಒತ್ತುವರಿ ಬಗೆಗಿನ ತನಿಖಾ ವಿಚಾರ:
ಪ್ರತಿ ಜಿಲ್ಲೆಗಳಲ್ಲಿ ಎಷ್ಟೆಷ್ಟು ಕೆರೆಗಳಿವೆ ಎನ್ನುವ ಮಾಹಿತಿಯಿದೆ, ಎಲ್ಲೆಲ್ಲಿ ಒತ್ತುವರಿಯಾಗಿದೆ ಎನ್ನುವ ಕುರಿತು ಪ್ರಕರಣಗಳಿವೆ, ಒತ್ತುವರಿ ತೆರವುಗೊಳಿಸುವ ನಿರ್ದೇಶನವಿದೆ. ೨೦೧೮ ರಿಂದ ಇಂತಹ ಪ್ರಕರಣಗಳು ಬಾಕಿ ಉಳಿದಿವೆ, ಇವು ವಿಲೇವಾರಿ ಮಾಡುವಂತಹ ಪ್ರಕರಣಗಳಲ್ಲ, ಒತ್ತುವರಿ ತೆರವು, ಹೂಳು ತೆಗೆಯುವುದು, ಹಸಿರು ಕಾರಿಡಾರ್ ನಿರ್ಮಾಣ
ತ್ಯಾಜ್ಯ ನೀರು ಸೇರುವಿಕೆಯನ್ನು ತಡೆಗಟ್ಟುವುದು,
ತ್ಯಾಜ್ಯ ನೀರು ಸಂಸ್ಕರಣ ಘಟಕಗಳನ್ನು ಹೆಚ್ಚಿಸುವಂತಹ ಕೆಲಸಗಳು ನಡೆಯುತ್ತಿವೆ. ಇವುಗಳ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಯಾರ ಒತ್ತಡಕ್ಕೆ ಲೋಕಾಯುಕ್ತ ಇಲಾಖೆ ಮಣಿಯಲ್ಲ ಎಂಬುದನ್ನು ಸ್ಪಷ್ಟವಾಗಿ ಸಮರ್ಥಿಸಿದರು.
