ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನವನ್ನು ಒದ್ದು ಕಿತ್ಕೊಳೋದು ಹೇಗೆ ಅಂತ ಗೊತ್ತಿದೆ-ಆರ್.ಅಶೋಕ್
1 min read
ಹಾಸನ : ಮೈಸೂರು ಉದಯಗಿರಿ ಗಲಭೆ ಪ್ರಕರಣ ವಿಚಾರ ಸೇರಿದಂತೆ, ರಾಜ್ಯ ಸರ್ಕಾರದ ವೈಫಲ್ಯಗಳು, ಬಣ ರಾಜಕೀಯದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆ, ಸಕಲೇಶಪುರದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸರ್ಕಾರದ ಮಂತ್ರಿಮಂಡಲದಲ್ಲಿರುವ ಸಚಿವರು ಎರಡು ಭಾಗವಾಗಿದ್ದಾರೆ. ಒಂದು ಸಿದ್ದರಾಮಯ್ಯ ಬಣ, ಇನ್ನೊಂದು ಡಿ.ಕೆ.ಶಿವಕುಮಾರ್ ಬಣ. ಡಿ.ಕೆ.ಶಿವಕುಮಾರ್ ಒಂದು ದಾರಿ ಹಿಡಿದ್ರೆ, ಸಿದ್ದರಾಮಯ್ಯ ಅವರು ಒಂದು ದಾರಿ ಹಿಡಿಯುತ್ತಿದ್ದಾರೆ . ಪೊಲೀಸ್‌ರ ಮೇಲೆ ಹಲ್ಲೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದಿದ್ದರೆ ಇಡೀ ಪೊಲೀಸ್ ಸ್ಟೇಷನ್ ಹೊತ್ತಿ ಉರಿಯುತ್ತಿತ್ತು. ಪೊಲೀಸರು ಎಚ್ಚರಿಕೆಯಿಂದ ಕ್ರಮ ತೆಗೆದುಕೊಂಡು ಯಾವುದೇ ಅನಾಹುತ ಆಗದಂತೆ ಕ್ರಮ ತೆಗೆದುಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರಿತಿಕ್ರಿಯೆ ನೀಡಿ, ಡಿ.ಕೆ.ಶಿವಕುಮಾರ್ ರಿಯಾಕ್ಷನ್ ಮಾಡಿದ್ರಾ, ಡಿ.ಕೆ.ಶಿವಕುಮಾರ್‌ಗೆ ಒದ್ದು ಕಿತ್ಕೊಳೋದು ಹೇಗೆ ಅಂತ ಗೊತ್ತಿದೆ. ಆ ಕಲೆ ಅವರಿಗೆ ಕರಗತವಾಗಿ ಬಂದಿದೆ. ಡಿ.ಕೆ.ಶಿವಕುಮಾರ್ ಸಮಯ ಕಾದು ಒದ್ದು ಕಿತ್ಕೊತಾರೆ.
ಅವಾಗ ಕಾಂಗ್ರೆಸ್ ನೆಲಕಚ್ಚುತ್ತೆ ಅಷ್ಟೇ. ಸರ್ಕಾರ ಎಲ್ಲಿದೆ, ಸರ್ಕಾರ ಈಗಾಗಲೇ ಪಾಪರ್ ಆಗಿದೆ. ಪ್ರತಿದಿನ ಸಿಎಂ ಇರ್ತಾರೋ, ಹೋಗ್ತಾರೋ ಅಂತ ಆಗಿದೆ. ಒಂದು ವರ್ಷದಿಂದ ಇದು ನಡೆಯುತ್ತಿದೆ
ವಿರೋಧ ಪಕ್ಷದ ನಾಯಕನಾಗಿ ನನಗೆ ಮಾಹಿತಿ ಇದೆ. ನವೆಂಬರ್ ಡೆಡ್‌ಲೈನ್, ನವೆಂಬರ್ 15, 16 ರೊಳಗೆ ವರ್ಗಾವಣೆ ಆಗುತ್ತೆ. ಆಗಿಲ್ಲ ಅಂದರೆ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಪೋಟ ಆಗುತ್ತೆ. ಬೆಂಕಿ ಆರಿಸಲು ಅಗ್ನಿಶಾಮಕ ವಾಹನ ಸಾಕಾಗಲ್ಲ. ಅಗ್ನಿಶಾಮಕ ವಾಹನ ಹುಡುಕಿ, ಎಲ್ಲೆಲ್ಲಿವೆ ತರಿಸಿಕೊಂಡು ಈಗಲೇ ರೆಡಿ ಮಾಡಿಕೊಳ್ಳಿ. ಪ್ರಳಯವಂತೂ ಆಗೇ ಆಗುತ್ತೆ, ಜ್ವಾಲಾಮುಖಿ ಸಿಡಿಯುತ್ತೆ. ಆ ಸಂದರ್ಭದಲ್ಲಿ ಅಗ್ನಿಶಾಮಕ ವಾಹನ ಅವಶ್ಯಕತೆ ಇರುತ್ತೆ, ಎಲ್ಲಾ ಈಗಲೇ ಬುಕ್ಕಿಂಗ್ ಮಾಡ್ಕೊಳಿ ಎಂದು ಭವಿಷ್ಯ ನುಡಿದಿದ್ದಾರೆ,
ಕಾಂಗ್ರೆಸ್‌ನವರು ಮುಸ್ಲಿಮರು ಹಾಕಿರುವ ಬಿಕ್ಷೆಯಲ್ಲಿರುವವರು. ಬಿಕ್ಷೆ ಕೊಟ್ಟವರಿಗೆ ಋಣ ತೀರಿಸಲು ಮುಸ್ಲಿಮರ ಪರವಾಗಿ ನಿಂತಿದ್ದಾರೆ. ಅವನ್ಯಾವನೋ ಕಳ್ಳ ಯಾವ ರೀತಿ ಭಾಷಣ ಮಾಡಿದ್ದಾನೆ. ಬೆಂಕಿ ಹಚ್ಚಲು ಏನೇನು ಹೇಳಬೇಕು ಅಷ್ಟು ಹೇಳಿದ್ದಾರೆ , ಅವನನ್ನು ಇದುವರೆಗೂ ಬಂಧಿಸಿಲ್ಲ. ಎಲ್ಲಾ ಮಂತ್ರಿಗಳು ಪೊಲೀಸರಿಗೆ ಥೂ ಅನ್ನುವ ಪದ ಬಳಸುತ್ತಾರೆ. ಕಾಂಗ್ರೆಸ್‌ನವರ ಅಪ್ಪನ ಮನೆಯಿಂದ ಪೊಲೀಸರಿಗೆ ಸಂಬಳ ಕೊಡುತ್ತಿಲ್ಲ. ಅವರಿಗೆ ಸ್ಟಾರ್, ಬ್ಯಾಡ್ಜ್‌ನ್ನು ಕಾಂಗ್ರೆಸ್‌ನವರು ಅವರ ಅಪ್ಪನ ಮನೆಯಿಂದ ತಂದುಕೊಟ್ಟಿಲ್ಲ, ಜನಗಳ ಟ್ಯಾಕ್ಸ್‌ನಲ್ಲಿ ಕೊಟ್ಟಿರುವುದು. ಪೊಲೀಸರನ್ನು ಹೀನಾಯವಾಗಿ, ಕೆಟ್ಟ ಪದ ಬಳಕೆ ಮಾಡಿ ಅವರ ಆತ್ಮಸ್ಥೈರ್ಯ ಕುಗ್ಗಿಸಿದ್ದಾರೆ ಎಂದರು
