ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆಗೆ ೫೦ ರ ತಾತ ಪರಾರಿ
1 min read
ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆಗೆ ೫೦ ರ ತಾತ ಪರಾರಿ
ಹುಬ್ಬಳ್ಳಿ: ಪ್ರೀತಿ ಕುರುಡು ಅಂತಾರೆ, ಅದಕ್ಕೆ ವಯಸ್ಸು, ಬಣ್ಣ, ಜಾತಿ, ವರ್ಗ, ಬಡವ-ಧನಿಕ ಎನ್ನುವುದೆಲ್ಲಾ ನಗಣ್ಯ. ಅಂತಹದ್ದೇ ಒಂದು ಕತೆ ಹುಬ್ಬಳ್ಳಿಯಲ್ಲಿ ನಡೆದುಹೋಗಿದೆ.
ಎರೆಡು ಮಕ್ಕಳ ೫೦ ವರ್ಷದ ವಯಸ್ಸಿನ ತಾತ ಸಮಾನ ವ್ಯಕ್ತಿಯೊಬ್ಬ ಹದಿಹರೆಯ ೧೮ ವರ್ಷದ ಹುಡುಗಿಯನ್ನ ಪ್ರೀತಿಸಿ ಕೊನೆಗೂ ಹುಡುಗಿಯೊಂದಿಗೆ ಪರಾರಿಯಾಗಿದ್ದಾನೆ.
ಹುಡುಗಿ ಹುಬ್ಬಳ್ಳಿ ಚಾಲಕ್ಯ ನಗರದ ದೀಪಕ್-ಶೀತಲ್ ರ ಎರೆಡನೇ ಮಗಳೇ ಆಗತಾನೇ ಹದಿಹರೆಯಕ್ಕೆ ಕಾಳಿಡುತ್ತಿದ್ದ ಕರಿಷ್ಮಾ…
ಕರಿಷ್ಮಾ ಬಡತನವನ್ನೇ ಬಂಡವಾಳ ಮಾಡಿಕೊಂಡ ೫೦ ವರ್ಷದ ಪ್ರಕಾಶ ಗೋಪಿಯೂ ಅದೇ ಭಾಗದವನಾಗಿದ್ದದ್ದು ಕರಿಷ್ಮಾಳ ಮೇಲೆ ಕಣ್ಣಾಕಲು ಅನುಕೂಲವಾಗಿತ್ತು.
ಕರಿಷ್ಮಾಳ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಎರೆಡು ಮೂರು ವರ್ಷದ ಹಿಂದೆಯೇ ಕರಿಷ್ಮಾಳ ಹಿಂದೆ ಬಿದ್ದಿದ್ದ ಪ್ರಕಾಶ್ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದ್ದರ ಪರಿಣಾಮ ಹುಡುಗಿ ಕರಿಷ್ಮಾಳನ್ನು ಮಹಾರಾಷ್ಟ್ರದ ಕೊಲಲಾಪುರದ ಅಜ್ಜಿ ಮನೆಯಲ್ಲಿ ಬಿಡಲಾಗಿತ್ತು.
ಅಲ್ಲಿಂದಲೇ ಇದೇ ವರ್ಷ ೩ರಂದು ತಾತನ ಜೊತೆ ಮೊಮ್ಮಗಳ ವಯಸ್ಸಿನ ಕರಿಷ್ಮಾ ಕಾಣೆಯಾಗಿದ್ದಾಳೆ. ಈ ವರೆಗೆ ಇಬ್ಬರ ಚಲನ ವಲನದ ಸುಳಿವು ಸಿಗದೆ ಬಡಪಾಯಿ ಪೋಷಕರು ಕಂಗಾಲಾಗಿದ್ದಾರೆ. ಇದೇ ಕೊರಗಿನಲ್ಲಿ ಪೋಷಕರಿಗೆ ದಿನ ವರುಷಗಳಾಗಿ ಕಾಡುತ್ತಿದೆ.
