ದೇವನಹಳ್ಳಿ: ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಿನ ಬಳಿ ಪುಂಡರ ಹಾವಳಿ
1 min read
ದೇವನಹಳ್ಳಿ: ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಿನ ಬಳಿ ಪುಂಡರ ಹಾವಳಿ ಹೆಚ್ಚಾಗಿದ್ದು ಬಾರ್ ಬಳಿ ಎಣ್ಣೆ ಖರೀದಿಸಲು ಬಂದವನಿಗೆ ಹಿಗ್ಗಾಮುಗ್ಗಾ ಥಳಿಸಿ ಕಳುಹಿಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರನಹಳ್ಳಿ ಬಾರ್ ನಲ್ಲಿ ನಡೆದಿದೆ.
ಬಾರ್ ನಲ್ಲಿ ನಿಂತಿದ್ದವನ ಜೊತೆ ಕಿರಿಕ್ ತೆಗೆದು ಹಲ್ಲೆ ನಡೆಸಿರುವ ಪುಂಡರ ಹಾವಳಿ ಬಾರ್ ನ ಸಿಸಿ ಕ್ಯಾಮರಾದಲ್ಲಿ ಇಡೀ ದೃಶ್ಯ ಸೆರೆಯಾಗಿದೆ.
ಕಳೆದ 31 ರಂದು ನಡೆದಿರುವ ಘಡನೆ ತಡವಾಗಿ ಬೆಳಕಿಗೆ ಬಂದಿದೆ.ಗ್ರಾಮದ ಮಧು ಮತ್ತು ರವಿ ಕಿಶೋರ್ ಎಂಬುವವನಿಂದ ಹಲ್ಲೆ ನಡೆದಿದೆ. ಆದರೆ ತನ್ನ ಗ್ರಾಹಕನ ಮೇಲೆ ಹಲ್ಲೆ ನಡೆಯುತ್ತಿದ್ರು ಸಹಾಯಕ್ಕೆ ಬಾರದೆ ನೋಡುತ್ತಾ ನಿಂತ ಬಾರ್ ಸಿಬ್ಬಂದಿ ಮತ್ತು ಜನರ ನಡೆ ಅಚ್ಚರಿ ಮೂಡಿಸಿದೆ. ಮೂರು ನಾಲ್ಕು ಭಾರಿ ಇದೇ ರೀತಿ ಅಮಾಯಕರ ಮೇಲೆ ಪುಂಡರು ಹಲ್ಲೆ ಮಾಡಿರುವ ಆರೋಪವೂ ಕೇಳಿ ಬರುತ್ತಿದ್ದು ಪಡ್ಡೆಗಳ ಹಾವಳಿಯನ್ನು ಪ್ರಶ್ನಿಸುವವರು ಭಯ ಪಡುವ ಹಂತಕ್ಕೆ ತಲುಪಿದ್ದಾರೆ.
ಹಲ್ಲೆ ಮಾಡಿದಾಗಲೆಲ್ಲ ಪ್ರಕರಣ ದಾಖಲಿಸಿ ಪೊಲೀಸರು ಸುಮ್ಮನಿರುವುದೇ ಇಂತಹ ಪ್ರಕರಣಗಳು ಮರುಕಳಿಸಲು ಸಾಧ್ಯ ಎಂಬ ಆರೋಪವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಜಾಲ ಪೊಲೀಸರ ವಿರುದ್ದ ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ಚಿಕ್ಕಜಾಲ ಪೊಲೀಸ್ ಠಾಣೆಯ ನಡೆಯ ಮೇಲೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.https://youtu.be/RaKIcK0C-GA
