ನವಲಿ ಗ್ರಾಮದಲ್ಲಿ ಪ್ರತ್ಯಕ್ಷವಾದ ಕಾಡುಕೋಣ
1 min read
ಕೊಪ್ಪಳ:
ನವಲಿ ಗ್ರಾಮದಲ್ಲಿ ಪ್ರತ್ಯಕ್ಷವಾದ ಕಾಡುಕೋಣ
ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ಕಾಡುಕೋಣ ಪ್ರತ್ಯಕ್ಷಗೊಂಡು ಗ್ರಾಮಸ್ಥರು ಆತಂಕಗೊಂಡಿದ್ದ ಘಟನೆ ನಡೆದಿದೆ. ಎರೆಡು ಮೂರು ದಿನದಿಂದ ಕಂಡು ಬಂದ ಕಾಡುಕೋಣದ ಓಡಾಟ ಜನರ ಕಣ್ಣಿಗೆ ಬಿದ್ದು ಗ್ರಾಮಸ್ಥರು ಗಾಬರಿಗೊಂಡಿದ್ದರು.
ನಿನ್ನೆ ಗಂಗಾವತಿ ವಲಯ ಅರಣ್ಯಾಧಿಕಾರಿಗಳ ಸಿಬ್ಬಂದಿ ಕಾಡುಕೋಣವನ್ನು ಸೆರೆ ಹಿಡಿದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಡುಕೋಣ ರಕ್ಷಣೆ ಮಾಡಿ ಹಂಪಿ ಮೃಗಾಲಯಕ್ಕೆ ಕಳುಸಲು ಸಿದ್ದತೆಯನ್ನು ಅಧಿಕಾರಿಗಳು ನಡೆಸಿದ್ದಾರೆ.
ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
