ಸಾಮಾಜಿಕ ವಿಚಾರಗಳಿಗೆ ಮಿಡಿಯುತ್ತಿದ್ದ ದಸಂಸ ನಾಯಕ ಆನೇಕಲ್ ಗೂಳಿಮಂಗಲ ನಾಗಪ್ಪ ಇನ್ನಿಲ್ಲ
1 min read

ಸಾಮಾಜಿಕ ವಿಚಾರಗಳಿಗೆ ಮಿಡಿಯುತ್ತಿದ್ದ ದಸಂಸ ನಾಯಕ ಹೃದಯಾಘಾತದಿಂದ ಮೃತ್ಯು.
ಬೆಂ,ಆನೇಕಲ್,ಫೆ,05: ಆನೇಕಲ್ ಭಾಗದ ಶೋಷಿತ ಸಮುದಾಯಗಳಮೇಲಿನ ದೌರ್ಜನ್ಯಗಳನ್ನಷ್ಟೇ ಅಲ್ಲದೆ ಆಗಾಗ್ಗೆ ರಾಜ್ಯ ದೇಶದಲ್ಲಿ ನಡೆಯುತ್ತಿದ್ದ ದಲಿತರ ಮೇಲಿನ ಶೋಷಣೆಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಪ್ರರಿಭಟನೆಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಜಿ ನಾಗಪ್ಪ ನಿಧನರಾಗಿದ್ದಾರೆ. ಗೂಳಿಮಂಗಲ ನಾಗಪ್ಪ ಎಂದೇ ಕರೆಯಲಾಗುತ್ತಿದ್ದ ಹಿರಿಯ ಹೋರಾಟಗಾರ. ಆನೇಕಲ್ ಸುತ್ತ ರಿಯಲ್ ಎಸ್ಟೇಟ್ ದಂಧೆಗಳಲ್ಲಿ ಶೋಷಿತರ ಪರ ದನಿಯಾಗಿ ಹೆಸರುಗಳಿಸಿದ್ದ ನಾಗಪ್ಪ ದಿನ ಬೆಳಗಾದರೆ ಪ್ರತಿದಿನದ ಆಗುಹೋಗುಗಳ ಕುರಿತು ಹತ್ತು ಹಲವು ನಾಯಕರೊಂದಿಗೆ ಚರ್ಚಿಸಿ ಕೈಲಾದ ಮಟ್ಟಿಗೆ ಪ್ರತಿರೋಧ ಒಡ್ಡುತ್ತಿದ್ದ ವ್ಯಕ್ತಿತ್ವ ಹೊಂದಿದ್ದರು ಎಂದು ಒಡನಾಡಿಗಳಾದ ತಿರುಪಾಳ್ಯ ಮುನಿರಾಜು, ನೆರಳೂರು ಶ್ರೀನಿವಾಸ್, ಹೊಂಪಲಘಟ್ಟ ರವಿ, ಪತ್ರಕರ್ತ ನೆರಳೂರು ರಾಜು ನುಡಿ ನಮನ ಸಲ್ಲಿಸಿದರು.
